Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಚಿನ್ನವು ಸಾಮಾಜಿಕ ಹಾಗೂ ಭಾವನಾತ್ಮಕ ಮೌಲ್ಯಗಳೆರಡನ್ನೂ ಹೊಂದಿರುವ ಒಂದು ಹಿತ ನೀಡುವ ಧಾತುವಾಗಿದೆ. ಭಾರತೀಯರು ಶುಭದಿನದಂದು ಚಿನ್ನದಲ್ಲಿ ಹೂಡಿಕೆ ಏಕೆ ಮಾಡುತ್ತಾರೆ ಎಂದು ತಿಳಿಯಿರಿ.
ಚಿನ್ನದ ಉಪಸ್ಥಿತಿಯಿಲ್ಲದ ಒಂದು ಭಾರತೀಯ ವಿವಾಹವನ್ನು ನೀವು ಚಿತ್ರಿಸಬಲ್ಲಿರಾ? ಉತ್ತರವು ನೇರವಾದ ಇಲ್ಲ ಆಗಿದೆ, ಅಲ್ಲವೇ?
ಚಿನ್ನವು ಮದುವೆ ಸಮಾರಂಭಗಳಲ್ಲಿ ಮಾತ್ರವಲ್ಲ, ಆದರೆ ಅಕ್ಷಯ ತೃತೀಯ, ಧನ್ತೇರಸ್, ಕರ್ವಾಚೌತ್, ದೀಪಾವಳಿ, ಮಕರ ಸಂಕ್ರಾತಿ, ನವರಾತ್ರಿ ಮುಂತಾದ ಹಬ್ಬಗಳಲ್ಲೂ ಕೇಂದ್ರ ಬಿಂದುವಾಗಿರುತ್ತದೆ.
ಭಾರತೀಯರಾದ ನಮಗೆ, ಚಿನ್ನವು ಕೇವಲ ಒಂದು ಧಾತುವಲ್ಲ - ಬಲಿಷ್ಠ ಭಾವನಾತ್ಮಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೊಂದಿದ ಇದು ಒಂದು ‘ಹಿತ ನೀಡುವ’ ಧಾತುವಾಗಿದೆ.
ಚಿನ್ನಕ್ಕಾಗಿ ನಮ್ಮ ಹಂಬಲವು ಕಲಾತೀತವಾಗಿದ್ದು ಇದು ಪ್ರತೀ ಶುಭ ಸಮಾರಂಭದ ಒಂದು ಪ್ರಮುಖ ಅಂಗವಾಗಿದೆ. ನೀವು ಎಲ್ಲಿ ಹೋದರೂ ಚಿನ್ನವನ್ನು ಕಾಣುತ್ತೀರಿ - ಒಬ್ಬ ಚಾಲಕನ ಮದುವೆಯಿಂದ ಹಿಡಿದು ರಾಣಿಯ ಕಿರೀಟದ ವರೆಗೆ.
ಚಿನ್ನದ ಹುರುಪಿನಲ್ಲಿ ಏನೋ ಒಂದು ವಿಶೇಷತೆ ಇದೆ ಹಾಗೂ ಇದು ನಮ್ಮ ಆರಾಮ ಹಾಗೂ ಆರೈಕೆಯ ಅಗತ್ಯಗಳಿಗೆ ಸರಿಹೊಂದುತ್ತದೆ.
ಆದ್ದರಿಂದಲೇ, ಭಾರತವು ಇಂದು ವಿಶ್ವದಲ್ಲೇ ಅತೀ ದೊಡ್ಡ ಚಿನ್ನದ ಗ್ರಾಹಕನಾಗಿರುವುದರಲ್ಲಿ ಆಶ್ಚರ್ಯವಿಲ್ಲ.
ವಾಸ್ತವವಾಗಿ, ಶುಭ ದಿನಗಳನ್ನು ಚಿನ್ನದ ಉಡುಗೊರೆ ನೀಡುವುದನ್ನೂ ಒಂದು ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ. ಮದುವೆ ಸಮಾರಂಭಗಳ ಹಾಗೆಯೇ, ಎಲ್ಲಿ ಕೇವಲ ಮದುವೆ ಸಂಪ್ರದಾಯದ ಸಮಯದಲ್ಲಿ ಉಡುಗೊರೆ ನೀಡುವುದಕ್ಕಾಗಿಯೇ ಸುಮಾರು 50% ಹೆಚ್ಚು ಚಿನ್ನಕ್ಕೆ ಬೇಡಿಕೆ ಹೊಂದಿರುವಂತೆ ಹೇಳಲಾಗಿದೆ.
ಚಿನ್ನವನ್ನು ಅದೃಷ್ಟಕರ ಹಾಗೂ, ಧಾರ್ಮಿಕ ಸಂಪ್ರದಾಯಗಳಲ್ಲಿ ಬಳಸುವ ಕಾರಣ, ಪವಿತ್ರ ಧಾತು ಎಂದೂ ನಂಬಲಾಗುತ್ತದೆ. ಇದನ್ನು ದೇವರನ್ನು ಅಲಂಕರಿಸಲು ಉಪಯೋಗಿಸಲಾಗುತ್ತದೆ ಹೀಗಾಗಿ ಭಾರತೀಯ ಮಂದಿರಗಳು ವಿಶ್ವದ ಅತೀ ದೊಡ್ಡ ಚಿನ್ನದ ನಿಧಿಯಾಗಿದೆ.
ಚಿನ್ನದ ಒಂದು ಬಿಲ್ಲೆ ಅಥವಾ ಪೆಟ್ಟಿಗೆ ತುಂಬಾ ಚಿನ್ನದ ನಾಣ್ಯಗಳೂ ಎಂದಿಗೂ ನಿರುಪಯುಕ್ತವಾಗಿರುವುದಿಲ್ಲ. ಎಷ್ಟು ಹೆಚ್ಚು ಜನರು ಅದನ್ನು ಖರೀದಿಸಲು ಬಯಸುತ್ತಾರೆಯೋ ಅದರ ಮೌಲ್ಯವು ಅಷ್ಟೇ ಹೆಚ್ಚುತ್ತದೆ. ಈ ಆಕರ್ಷಕ ಧಾತುವು ತನ್ನ ಮಾಲೀಕರಿಗೆ ನಿಜವಾದ ನಿಧಿಯೇ ಆಗಿದೆ.
ಆಭರಣ ಉದ್ಯಮದಲ್ಲಿ ವಜ್ರ, ಪ್ಲಾಟಿನಂ, ಮುತ್ತುಗಳು ಹಾಗೂ ಕೃತಕ ಚಿನ್ನ ದಂತಹ ಹಲವು ಪರ್ಯಾಯ ಗಳು ಹೊರಹೊಮ್ಮಿದರೂ, ಚಿನ್ನವು ಅಗ್ರ ಸ್ಥಾನದಲ್ಲಿ ಮುಂದುವರಿದಿದೆ - ಇದು ನೆರೆಕರೆಯವರ ಈರ್ಷ್ಯೆ ಹಾಗೂ ಮಾಲೀಕನ ಹೆಮ್ಮೆ ಯ ಮೂಲವಾಗಿದೆ.
ಚಿನ್ನವು ಒಂದು ಸರಳ ಹೂಡಿಕೆಯಾಗಿದೆ - ಎಲ್ಲಾ ಆರ್ಥಿಕ ವರ್ಗದ ಜನರಿಂದ ಬಳಸಲ್ಪಡುತ್ತದೆ. ಕೇವಲ ಒಂದು ಗ್ರಾಂ ಚಿನ್ನದ ಖರೀದಿಯೊಂದಿಗೆ, ಒಬ್ಬರು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು! ಬೇರೆ ಯಾವ ಉಳಿತಾಯದ ಸಾಧನವು ಈ ರೀತಿಯ ಹೊಂದಾಣಿಕೆಯನ್ನು ನೀಡುವುದಿಲ್ಲ.
ಇಂದು ಚಿನ್ನವನ್ನು ಖರೀದಿಸುವುದು ಹಾಗೂ ಉಡುಗೊರೆ ನೀಡುವುದು ಎಂದಿಗಿಂತಲೂ ಸರಳವಾಗಿದೆ- ಮಾರುಕಟ್ಟೆಯಲ್ಲಿ ಇಷ್ಟೊಂದು ಆಯ್ಕೆಗಳು ಲಭ್ಯವಿರುವ ಕಾರಣ. ಅತೀ ಸರಳ, ಸುರಕ್ಷಿತ ಹಾಗೂ ಅನುಕೂಲಕರ ಆಯ್ಕೆಯಾಗಿದೆ ಡಿಜಿಟಲ್ ಗೋಲ್ಡ್. ನೀವು ಚಿನ್ನ ಖರೀದಿಸಲು ಮನೆಯಿಂದ ಹೊರಬರಬೇಕೆಂದೂ ಇಲ್ಲ. ಇದನ್ನು ಖರೀದಿಸಿ, ಉಡುಗೊರೆ ನೀಡಿ, ಹೂಡಿಕೆ ಮಾಡಿ - ಜಾರ್ ಆಪ್ ನೊಂದಿಗೆ ಕ್ಷಣಗಳಲ್ಲಿ.
ಚಿನ್ನದಲ್ಲಿ ಹೂಡಿಕೆ ಮಾಡುವಾಗ ಡಿಜಿಟಲ್ ಜಾಣ್ಮೆಯ ಆಯ್ಕೆ ಏಕೆ ಎಂಬ ಕಾರಣಗಳನ್ನು ಹಾಗೂ ಅದರ ಲಾಭಗಳ ಬಗ್ಗೆ ಅರಿತುಕೊಳ್ಳಿ.
ಕ್ಷಣಗಳಲ್ಲಿ ಚಿನ್ನವನ್ನು ಖರೀದಿಸಿ. ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ. ನಮ್ಮ ಸಮಾಜದಲ್ಲಿ ಬೇರೂರಿರುವ ಹಾಗೂ ಅನಿಯಮಿತ ರಿಟರ್ನ್ ಗಳನ್ನು ನೀಡುವ ಈ ಮೋಡಿ ಮಾಡುವ ಧಾತುವಿನ ಮೇಲೆ ಹೂಡಿಕೆ ಮಾಡಿ.
ಜಾರ್ ಆಪ್ ನೊಂದಿಗೆ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದು ಗೊಂದಲ ರಹಿತ ಹೇಗೆ ಎಂದು ತಿಳಿಯಿರಿ ಹಾಗೂ ಜಾರ್ ಆಪ್ ಅನ್ನು ಡೌನ್ಲೋಡ್ ಮಾಡಿ ಇಂದೇ ನಿಮ್ಮ ಹೂಡಿಕೆಯ ಪಯಣವನ್ನು ಆರಂಭಿಸಿ!