Playstore Icon
Download Jar App
Digital Gold

ಈ ಹಬ್ಬದ ಋತುವಿನಲ್ಲಿ ಉಡುಗೊರೆಯಾಗಿ ಚಿನ್ನವನ್ನು ಖರೀದಿಸಲು 5 ಕಾರಣಗಳು - ಜಾರ್ ಅಪ್ಲಿಕೇಶನ್

December 30, 2022

ಎಲ್ಲರೂ ಉಡೊಗರೆಯಾಗಿ ಚಿನ್ನವನ್ನು ಖರೀದಿಸುತ್ತಿದ್ದಾರೆ ಹಾಗೂ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಏಕೆಂದು ನೀವು ಯೋಚಿಸುತ್ತಿರಬೇಕು ಅಲ್ಲವೇ? ಕಳೆದುಕೊಳ್ಳುವ ಭಯದಲ್ಲಿರಬೇಡಿ. ಈ ವರ್ತನೆಯನ್ನು ಅರ್ಥ ಮಾಡಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ವರ್ಷದ ಆ ಸಮಯ ಬಂದಾಗಿದೆ - ಸಂಜೆಯ ಬಾನನ್ನು ದೀಪಗಳು ಪ್ರಕಾಶಿಸುತ್ತಿವೆ, ಪಟಾಕಿಯ ಶಬ್ದ ಹರ್ಷವನ್ನು ತಂದಿದೆ, ಉಡೊಗರೆಗಳ ವಿನಿಮಯವಾಗಿದೆ.

ಹೂಗಳು, ತಿಂಡಿ, ಸಮಾರಂಭ, ಹೊಸ ಉಡುಪುಗಳು - ಹಬ್ಬದ ಋತು ಅದರದ್ದೇ ಆದ ಒಂದು ಉತ್ಸಾಹವನ್ನು ತರುತ್ತದೆ.

ನಾವು ನಮ್ಮ ಸುತ್ತಲಿರುವವರ ಜೊತೆ ಒಂದು ಸಂಪರ್ಕ ಹಾಗೂ ಅನ್ಯೋನ್ಯತೆಯ ಭಾವನೆಯನ್ನು ಅನುಭವಿಸುತ್ತೇವೆ.

ನವರಾತ್ರಿ, ದಸರಾ, ಕರ್ವಾಚೌತ್, ಧನ್ತೇರಸ್ ಮತ್ತು ದೀಪಾವಳಿಗಳಂತಹ ಶುಭದಿನಗಳು ಹತ್ತಿರವಿರುವಾಗ, ಜನರು ಚಿನ್ನವನ್ನು ಖರೀದಿಸಲು ಮಾರುಕಟ್ಟೆಗೆ ಮುತ್ತಿಗೆ ಹಾಕುತ್ತಾರೆ.

ಚಿನ್ನ ಅನೇಕ ರೂಪದಲ್ಲಿ - ಚಿನ್ನದ ಆಭರಣ, ಚಿನ್ನದ ನಾಣ್ಯ ಮತ್ತು ಚಿನ್ನದ ಬಿಲ್ಲೆಗಳು. ಇತ್ತೀಚಿನ ಶತಮಾನಗಳಲ್ಲಿ, ಚಿನ್ನದಲ್ಲಿ ಹೂಡಿಕೆ ಮಾಡಲು ನಮಗೆ ಅನೇಕ ಆಯ್ಕೆಗಳಿವೆ - ಚಿನ್ನದ ETF ಗಳು, ಚಿನ್ನದ ಮ್ಯೂಚುವಲ್ ಫಂಡ್ ಗಳು, ಸಾವರಿನ್ ಗೋಲ್ಡ್ ಬಾಂಡ್ ಗಳು ಮತ್ತು ಡಿಜಿಟಲ್ ಗೋಲ್ಡ್.

ನಾವು ಚಿನ್ನವನ್ನು ಧರಿಸುತ್ತೇವೆ, ಪ್ರದರ್ಶಿಸುತ್ತೇವೆ, ಉಡುಗೊರೆಯಾಗಿ ನೀಡುತ್ತೇವೆ, ಸಂಗ್ರಹಣೆ ಮಾಡುತ್ತೇವೆ ಹಾಗೂ ಆಸೆ ಪಡುತ್ತೇವೆ. 24 - ಕ್ಯಾರೆಟ್ ಗಳ ಈ ಕುರುಡಾಗಿಸುವ, ಚಮಕ್ಕಿನ ಅದ್ಭುತ ನಮ್ಮನ್ನು ಸಂಪೂರ್ಣವಾಗಿ ಮರಳುಮಾಡಿದೆ.

ನಾವು ಇದನ್ನು ಬೆಲೆಬಾಳುವ, ಅಮೂಲ್ಯ ಹಾಗೂ ಪ್ರಮುಖ ಉಡುಗೊರೆಯ ಆಯ್ಕೆಯೆಂದೂ ಪರಿಗಣಿಸುತ್ತೇವೆ, ವಿಶೇಷವಾಗಿ ಮಗುವಿನ ಜನನ, ಮದುವೆ ಅಥವಾ ಹಬ್ಬದ ಸಂದರ್ಭಗಳಿಗಾಗಿ.

 

ಆದರೆ ಶುಭ ಸಂದರ್ಭಗಳಲ್ಲಿ ಜನರು ಚಿನ್ನವನ್ನು ಏಕೆ ಖರೀದಿಸುತ್ತಾರೆ?

ಭಾರತದಲ್ಲಿ, ಚಿನ್ನಕ್ಕೆ ಅತ್ಯಂತ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಇದೆ - ಇದು ಎಲ್ಲಾ ಧಾತುಗಳಿಗಿಂತ ಅಗ್ರ ಸ್ಥಾನದಲ್ಲಿದೆ.

ವರ್ಷಗಳು ಕಳೆದಂತೆ, ನಾವು ಚಿನ್ನಕ್ಕೆ ಎಷ್ಟು ಆಕರ್ಷಿತರಾಗಿದ್ದೇವೆ ಎಂದರೆ ವಿಶ್ವದಾದ್ಯಂತ ಅತೀ ಹೆಚ್ಚು ಚಿನ್ನ ಖರೀದಿಸುವಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ. ಆಶ್ಚರ್ಯಕರವೇನೂ ಅಲ್ಲ, ಅಲ್ಲವೇ?

ಏಕೆಂದರೆ ಚಿನ್ನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ಧನದ ಸಂಕೇತ. 

  • ಪೂಜ್ಯ ಹಾಗೂ ಪವಿತ್ರ - ಹಿಂದೂ ಪುರಾಣಗಳ ಪ್ರಕಾರ, ಚಿನ್ನವನ್ನು ಪೂಜ್ಯ ಹಾಗೂ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಹೆಚ್ಚಿನ ಭಾವನತ್ಮಕ ಅಂಶ ಹಾಗೂ ಹೆಚ್ಚಿನ ಗ್ರಹಿಕೆಯ ಮೌಲ್ಯವಿದೆ. ಇದು ನಮ್ಮನ್ನು ಸನಿಹ ತಂದು ಜನರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.

  • ಬಣ್ಣ ಹಾಗೂ ಸಕರಾತ್ಮಕತೆ - ಚಿನ್ನದ ಹಿತವೆನಿಸುವ ಬಣ್ಣವು ಸಕಾರಾತ್ಮಕ ಶಕ್ತಿಯನ್ನು ಪಸರಿಸಿ ಗುಣಪಡಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.

  • ಸಮೃದ್ಧಿ ಹಾಗೂ ಹೆಚ್ಚಳದ ಸಂಕೇತ - ಧನ್ತೇರಸ್ ಹಾಗೂ ದೇಪಾವಳಿಯ ಸಂದರ್ಭದಲ್ಲಿ ಚಿನ್ನ ಖರೀದಿಸುವ ಸಂಪ್ರದಾಯವನ್ನು ಧನ ಹಾಗೂ ಸಮೃದ್ಧಿಯ ದೇವತೆಗಳಾದ ದೇವಿ ಲಕ್ಷ್ಮಿ ಹಾಗೂ ಕುಬೇರರನ್ನು ಮನೆಗೆ ಆಮಂತ್ರಿಸುವುದಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ.

ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಅಂಶಗಳ ಹೊರತಾಗಿ, ಭಾರತೀಯರನ್ನು ಚಿನ್ನದ ಹುಚ್ಚರು ಎಂದು ಪರಿಗಣಿಸಲು ಇನ್ನೂ ಹಲವಾರು ಕಾರಣಗಳಿವೆ :

  • ದ್ರವರೂಪದ ನಗದಿಗೆ ಸಮಾನ - ಭದ್ರತೆ ಅಥವಾ ಆಸ್ತಿಯಾಗಿ, ಚಿನ್ನವೂ ಅತ್ಯಂತ ದ್ರವರೂಪದ ಹಾಗೂ ಸಾಗಿಸಬಲ್ಲದ್ದಾಗಿದೆ. ತುರ್ತು ಪರಿಸ್ಥಿತಿ ಇದ್ದರೆ ಯಾವಾಗ ಬೇಕಾದರೂ ಇದನ್ನು ನಗದಿಗೆ ಪರಿವರ್ತಿಸಬಹುದು ಹಾಗೂ ಇದೊಂದು ಉಪಕಾರಿ ಸ್ನೇಹಿತನಂತಿದೆ.

  • ಚಿನ್ನದ ಹೂಡಿಕೆ - ಚಿನ್ನವು ಅಮೂಲ್ಯ ಆಸ್ಥಿಯಾಗಿದ್ದು ನಿರಂತರವಾಗಿ ಇದರ ಮೌಲ್ಯ ಹೆಚ್ಚಿದೆ, ಆದ್ದರಿಂದ ಇದು ಭದ್ರ ಹಾಗೂ ಸುರಕ್ಷಿತ ಹೂಡಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಚಿನ್ನವು 20% ಕ್ಕಿಂತಲೂ ಹೆಚ್ಚಿನ ವರ್ಷಾನುವರ್ಷ  ರಿಟರ್ನ್ ಗಳನ್ನು ನೀಡಿದೆ. ಇದನ್ನು ಒಂದು ಉತ್ತಮ ವೈವಿಧ್ಯೀಕರಣ ಎಂದು ಪರಿಗಣಿಸಲಾಗಿದ್ದು, ಇದು ಪೋರ್ಟ್ಫೋಲಿಯೋದ ಅಪಾಯಗಳನ್ನು ಕಡಿಮೆಗೊಳಿಸುತ್ತದೆ. ಹೂಡಿಕೆ ತಜ್ಞರ ಪ್ರಕಾರ, ಚಿನ್ನದ ಹೂಡಿಕೆಯು ಒಬ್ಬ ವ್ಯಕ್ತಿಯ ಒಟ್ಟು ಹೂಡಿಕೆ ಪೋರ್ಟ್ಫೋಲಿಯೋದ 5% ರಿಂದ 10% ಆಗಿರಬೇಕು.

  • ಉತ್ತಮ ಉಡುಗೊರೆ ಆಯ್ಕೆ - ಹೆಚ್ಚಿನ ಸಮಾರಂಭ ಹಾಗೂ ಸಂಪ್ರದಾಯಗಳಲ್ಲಿ ಚಿನ್ನವನ್ನು ಉಡುಗೊರೆಯಾಗಿ ನೀಡುವುದು ಒಂದು ಅವಿಭಾಜ್ಯ ಅಂಗವಾಗಿದೆ. ಹಣದ ಒಳ್ಳೆಯ ಮೂಲವಾಗಿರುವುದನ್ನು ಹೊರತುಪಡಿಸಿ, ಇದನ್ನು ಅದೃಷ್ಟ ಎಂದೂ ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ ಚಿನ್ನವನ್ನು ಉನ್ನತ ಶ್ರೇಣಿಯ ಉಡುಗೊರೆಯಾಗಿ ಭಾವಿಸಲಾಗುತ್ತಿದ್ದು, ಇದು ವ್ಯಕ್ತಿಯ ಮೌಲ್ಯ ಹಾಗೂ ಭಾವನೆಯ ಶುದ್ಧತೆಯನ್ನು ಪ್ರದರ್ಶಿಸುತ್ತದೆ.

ಇನ್ನೇನೆಂದು ಊಹಿಸಿ? ಚಿನ್ನ ಉಡುಗೊರೆ ನೀಡುವುದು ಈಗ ಸರಳ ಹಾಗೂ ಗೊಂದಲ ರಹಿತವಾಗಿದೆ - ಡಿಜಿಟಲ್ ಗೋಲ್ಡ್ ಇನ್ವೆಸ್ಟ್ಮೆಂಟ್ ಆಪ್ ಮೂಲಕ.

ಜಾರ್ ಆಪ್ ಮೂಲಕ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿ. ನೀವು ನಿಮ್ಮ ಮನೆಯಿಂದಲೇ ಚಿನ್ನವನ್ನು ಖರೀದಿಸಬಲ್ಲಿರಲ್ಲದೆ ಸೋಲಿಸಲಾದ ಬೆಲೆಗಳಲ್ಲಿ ನಿಮ್ಮ ನೆಚ್ಚಿನವರಿಗೆ ಉಡುಗೊರೆಯನ್ನೂ ಕಳಿಸಬಹುದು.

ಡಿಜಿಟಲ್ ಗೋಲ್ಡ್ ನ ಮೂಲಕ ನಿಮ್ಮ ಒಲವಿನ ಒಂದು ಭಾಗವನ್ನು ಅವರೊಂದಿಗೆ ಹಂಚಿಕೊಳ್ಳಿ. ಈ ಡಿಜಿಟಲ್ ಗೋಲ್ಡ್ ಕೈಪಿಡಿಯನ್ನು ನೋಡಿ ಹಾಗೂ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆಯ ಬಗ್ಗೆ ಎಲ್ಲವನ್ನೂ ತಿಳಿಯಿರಿ.

ಈ ಹಬ್ಬದ ಋತುವಿನಲ್ಲಿ ನೀವು ಡಿಜಿಟಲ್ ಗೋಲ್ಡ್ ನ ಖರೀದಿ ಹಾಗೂ ಉಡುಗೊರೆ ನೀಡುವಿಕೆಯನ್ನು ಏಕೆ ಮಾಡಬೇಕು?

  • ಡಿಜಿಟಲ್ ಗೋಲ್ಡ್ ಅತ್ಯಂತ ದ್ರವರೂಪದ್ದಾಗಿವೆ

ಡಿಜಿಟಲ್ ಗೋಲ್ಡ್ ಅನ್ನು ಸುಲಭವಾಗಿ ಖರೀದಿಸಬಹುದು ಹಾಗೂ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ನೀವು ಭವಿಷ್ಯದಲ್ಲಿ ನಿಮ್ಮ ಚಿನ್ನಕ್ಕೆ ಸಂಪೂರ್ಣ ಮರು ಮಾರಾಟದ ಮೌಲ್ಯವನ್ನು ಪಡೆಯಲು ಡೀಲರ್ ಅನ್ನು ಸಂಪರ್ಕಿಸಬೇಕಾಗಿಲ್ಲ ಅಥವಾ ವರ್ಷಗಳ ವರೆಗೆ ಭದ್ರ ಚಿನ್ನ ಖರೀದಿಯ ಖಾತೆಯನ್ನು ಇಡಬೇಕಾಗಿಲ್ಲ. 

  • ಸರಳ ಸುಗಮ ಚಿನ್ನ - ₹1‍ ರಷ್ಟು ಕಡಿಮೆ ಬೆಲೆಯಲ್ಲಿ

ಈ ಹಬ್ಬದ ಸಮಯದಲ್ಲಿ ಜನಜಂಗುಳಿಯಿರುವ ತುಂಬಿದ ಮಾರುಕಟ್ಟೆಗಳಿಗೆ ಹೋಗುವ ಗೊಂದಲವಿಲ್ಲ. ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುವಾಗ, ನೀವು ಕನಿಷ್ಠ ಒಂದು ಗ್ರಾಂ ಚಿನ್ನವನ್ನು ಖರೀದಿಸಬೇಕಾಗುತ್ತದೆ, ಹಾಗೂ ಇದರ ಬೆಲೆಯಲ್ಲಿ ಪ್ರತಿದಿನ ಏರುಪೇರಾಗುತ್ತದೆ.

ಆದರೆ, ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದು ಕೈಗೆಟಕುವಂತದ್ದು ಹಾಗೂ ₹1‍ ರಷ್ಟು ಕಡಿಮೆ ಬೆಲೆಯಿಂದ ಇದರ ಖರೀದಿ ಹಾಗೂ ಮಾರಾಟ ಮಾಡಬಹುದು. ಇದು ಕೈಗೆಟಕುವಂತದ್ದು ಹಾಗೂ ಮಿತವಾದ ಆದಾಯದೊಂದಿಗೆಯೂ ನೀವು ಇದರಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು.

  • 24 ಕ್ಯಾರೆಟ್ ಶುದ್ಧ ಚಿನ್ನ, ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ

ನೀವು ಚಿನ್ನದ ಆಭರಣಗಳನ್ನು ಕೊಳ್ಳುವಾಗ, ಚಿನ್ನದ ಬೆಲೆ ಮಾತ್ರವಲ್ಲದೆ ತಯಾರಿಕಾ ಶುಲ್ಕ ಹಾಗೂ ಹೆಚ್ಚುವರಿ ತೆರಿಗೆಗಳನ್ನೂ ತೆರಬೇಕಾಗುತ್ತದೆ.

ಆಭರಣದ ಮಾದರಿ ಪ್ರಕಾರ ಆಭರಣಕಾರರು ಅದಕ್ಕೆ 7% ರಿಂದ 25% ವರೆಗಿನ ಬೆಲೆಯನ್ನು ಕಟ್ಟುತ್ತಾರೆ. ನೀವು ಆಯ್ಕೆ ಮಾಡಿದ ಆಭರಣದಲ್ಲಿ ಬೆಲೆಬಾಳುವ ಮುತ್ತುರತ್ನಗಳನ್ನು ಅಳವಡಿಸಿದ್ದರೆ, ಬೆಲೆಯು ಹೆಚ್ಚುತ್ತದೆ ಹಾಗೂ ಇದರ ಬೆಲೆಯನ್ನೂ ಚಿನ್ನದ ಬೆಲೆಯೊಂದಿಗೆ ಸೇರಿಸಲಾಗುತ್ತದೆ.

ನೀವು ಚಿನ್ನದ ಆಭರಣದೊಂದಿಗೆ ವ್ಯವಹರಿಸುವಾಗ, ನೀವು ಎಂದಿಗೂ ಆ ಕೆತ್ತಿದ ಆಭರಣದ ಮೌಲ್ಯವನ್ನು ಹಿಂಪಡೆಯಲಾಗುವುದಿಲ್ಲ.

ಡಿಜಿಟಲ್ ಗೋಲ್ಡ್ ನೊಂದಿಗೆ, ನೀವು ಕೇವಲ ಶುದ್ಧ ಚಿನ್ನದ ವ್ಯಾಪಾರವನ್ನು ಮಾಡುತ್ತೀರಿ, ಅಂದರೆ 24 ಕ್ಯಾರೆಟ್ ಚಿನ್ನ. ನೀವು ಖರ್ಚು ಮಾಡಿದ ಒಟ್ಟು ಮೊತ್ತವು ಚಿನ್ನದಲ್ಲೇ ಹೂಡಿಕೆಯಾಗುತ್ತದೆ. ನೀವು ಕೇವಲ ಖರೀದಿಯ ಸಮಯದಲ್ಲಿ 3% GST ಅನ್ನು ಪಾವತಿಸಬೇಕಾಗುತ್ತದೆ.

  • ಸುರಕ್ಷಿತ ಹಾಗೂ ಭದ್ರ

ಹೆಚ್ಚಿನವರು ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ ಏಕೆಂದರೆ ಇದು ಹೊಸ ಪರಿಕಲ್ಪನೆಯಾಗಿದ್ದು ಅವರಿಗೆ ಈ ವಿಷಯದಲ್ಲಿ ಜ್ಞಾನವಿಲ್ಲ. ಆದರೆ ಚಿಂತಿಸಬೇಡಿ, ಡಿಜಿಟಲ್ ಗೋಲ್ಡ್ ಒಂದು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.

ನಿಮ್ಮ ಖಾತೆಯಲ್ಲಿ ಸಂಗ್ರಹಣೆಯಾದ ಪ್ರತೀ ಗ್ರಾಂ ಚಿನ್ನಕ್ಕೂ ನೈಜ ಭೌತಿಕ ಚಿನ್ನದ ಬೆಂಬಲವಿರುತ್ತದೆ. ಇದರರ್ಥ ಯಾವುದೇ ಸಮಾಯದಲ್ಲಿ ಯಾವ ರೀತಿಯ ಅಪಾಯವೂ ಇಲ್ಲ. 

  • ಸಂಗ್ರಹಣೆಯ ಚಿಂತೆಯಿಲ್ಲ

ನಮ್ಮ ಭಾರತೀಯ ಕುಟುಂಬಗಳಲ್ಲಿ, ನಾವು ಹೆಚ್ಚಾಗಿ ನಮ್ಮ ಹಿರಿಯರು ಭೌತಿಕ ಚಿನ್ನವನ್ನು ಲಾಕರ್ ನಲ್ಲಿಡುವುದನ್ನು ನಾವು ನೋಡಿದ್ದೇವೆ. ಇದು ತುಂಬಾ ಅಪಾಯಕಾರಿ ಏಕೆಂದರೆ ಇದರಲ್ಲಿ ಕಳ್ಳತನದ ಭೀತಿ ಇರುತ್ತದೆ.

ಇದನ್ನು ತಪ್ಪಿಸಲು, ಇದನ್ನು ಬ್ಯಾಂಕ್ ಲಾಕರ್ ನಲ್ಲಿ ದೀರ್ಘಕಾಲಕ್ಕೆ ಇರಿಸಲಾಗುತ್ತದೆ ಇದಕ್ಕಾಗಿ ನೋಂದಣಿ ಶುಲ್ಕ, ವಾರ್ಷಿಕ ಶುಲ್ಕ, ಸೇವಾ ಶುಲ್ಕ ಇತ್ಯಾದಿ ರೂಪದಲ್ಲಿ ಸಂಗ್ರಹಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಡಿಜಿಟಲ್ ಗೋಲ್ಡ್ ನಿಮ್ಮ ದೀರ್ಘಾವದಿಯ ಖರ್ಚುಗಳು ಹಾಗೂ ಸಂಗ್ರಹಣಾ ಸಮಸ್ಯೆಗಳನ್ನು ತಪ್ಪಿಸುತ್ತದೆ. ಈ ಸೇಫ್ ಉಚಿತವಾಗಿದ್ದು ಫೇಸ್ ವ್ಯಾಲ್ಯೂ ನ ಮೇಲೆ ಇನ್ಶೂರ್ ಮಾಡಲಾಗುತ್ತದೆ.

ಚಿನ್ನದಲ್ಲಿ ಹೂಡಿಕೆ ಮಾಡುವಾಗ ಡಿಜಿಟಲ್ ಆಗುವುದು ಜಾಣ್ಮೆಯ ಆಯ್ಕೆ ಹೇಗೆ ಎನ್ನುವುದರ ಬಗ್ಗೆ ಅನ್ವೇಶಿಸಿ.

ಈ ಹಬ್ಬದ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರು ವಿಶೇಷರೆಂದು ಅವರಿಗೆ ತಿಳಿಸಿ ಜಾರ್ ಆಪ್ ಮೂಲಕ ಅವರಿಗೆ ಡಿಜಿಟಲ್ ಗೋಲ್ಡ್ ಅನ್ನು ಉಡುಗೊರೆಯನ್ನಾಗಿ ನೀಡಿ.

ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ಹಾಗೂ ಅನಿಯಮಿತ ರಿಟರ್ನ್ಸ್ ನೀಡುವ ಈ ಹೂಡಿಕೆಯಲ್ಲಿ ನಿಮ್ಮನ್ನು ನೀವೇ ತೊಡಗಿಸಿಕೊಳ್ಳಿ.

ಜಾರ್ ಆಪ್ ಮೂಲಕ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದು ಹೇಗೆ ಗೊಂದಲರಹಿತವಾಗಿದೆ ಎಂದು ತಿಳಿಯಿರಿ ಹಾಗೂ ಜಾರ್ ಆಪ್ ಅನ್ನು ಡೌನ್ಲೋಡ್ ಮಾಡಿ ಇಂದೇ ನಿಮ್ಮ ಉಳಿತಾಯ ಹಾಗೂ ಹೂಡಿಕೆಯ ಪಯಣವನ್ನು ಆರಂಭಿಸಿ!  

Subscribe to our newsletter
Thank you! Your submission has been received!
Oops! Something went wrong while submitting the form.