Playstore Icon
Download Jar App
Personal Finance

ನಿಮ್ಮ ದೈನಂದಿನ ಉಳಿತಾಯವನ್ನು ಪರಿಣಾಮಕಾರಿಯಾಗಿ ಮಾಡಬಹುದಾದ 7 ಮಾರ್ಗಗಳು - ಜಾರ್

December 28, 2022

ದೈನಂದಿನ ಬದುಕಿನಲ್ಲಿ ಹಣ ಉಳಿತಾಯವೇ ದೊಡ್ಡ ಸಮಸ್ಯೆ. ಹಲವಾರು ಕುಟುಂಬಗಳು ತಿಂಗಳ ಕೊನೆಯಲ್ಲಿ ನೆರೆಹೊರೆಯವರ ಹತ್ತಿರ ಕೈಗಡ (ಸಾಲ) ಪಡೆಯುವುದೂ ಇದೆ. ಈ 7 ಪರಿಣಾಮಕಾರಿ ಹಣದ ಸವಾಲುಗಳನ್ನು ಪರಿಶೀಲಿಸಿ.

ಹಾಗಾದರೆ ಚಿಂತೆ ಬಿಟ್ಟು ಬಿಡಿ! ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ನೀವು ಹಣ ಉಳಿತಾಯ ಮಾಡಲು ಬಯಸುತ್ತಿದ್ದರೆ ಈ ಏಳು ಪರಿಣಾಮಕಾರಿ ಹಣ ಉಳಿತಾಯದ ಮಾರ್ಗಗಳನ್ನು ಅನುಸರಿಸಿ.

ಹಣ ಉಳಿತಾಯದ ವಿಚಾರಕ್ಕೆ ಬಂದಾಗ ನಮ್ಮಲ್ಲಿ ಬಹುತೇಕರು ಅದನ್ನು ತಮಾಷೆಯ ಸಂಗತಿಯನ್ನಾಗಿ ಪರಿಗಣಿಸುತ್ತಾರೆ ಆದರೆ ಅದು ತಮಾಷೆಯ ಸಂಗತಿಯೂ ಅಲ್ಲ.

ಹೀಗಾಗಿಯೇ ನಮ್ಮ ಮನಸ್ಸು ಹಣ ಉಳಿತಾಯ ಮಾಡಬೇಕೆಂದರೆ, ನಾವು ಇಷ್ಟ ಪಡುವ ಸಂಗತಿಗಳಿಂದ ವಂಚಿತವಾಗಬೇಕು. ಇಲ್ಲವೆ ನಿಮ್ಮ ಸಂತೋಷಕ್ಕೆ ಮಿತಿ ವಿಧಿಸಿಕೊಂಡು ಕಟ್ಟುನಿಟ್ಟಾದ ಆಯವ್ಯಯ ರೂಪಿಸಿಕೊಂಡು ಸಂಪತ್ತನ್ನು ಕ್ರೋಢೀಕರಿಸಬೇಕು ಎಂದು ಪೂರ್ವನಿರ್ಧಾರಕ್ಕೆ ಬರಬೇಕು.

ಇದು ಫಲಪ್ರದವಾಗಬೇಕೆಂದರೆ, ನಾವು ನಮ್ಮ ಹಣವನ್ನು ಹೂಡಿಕೆ ಸಂಸ್ಥೆಗಳಾದ ಮ್ಯೂಚುಯಲ್ ಫಂಡ್ಸ್‍, ಎಸ್‍ಐಪಿ ಅಥವಾ ಎಲ್‍ಐಸಿಯಲ್ಲಿ ವಿನಿಯೋಗ ಮಾಡಬೇಕಾಗುತ್ತದೆ. ಆದರೆ, ದೀರ್ಘಕಾಲೀನ ಬದ್ಧತೆಯೊಂದಿಗೆ ತುರ್ತಾಗಿ ಹಣ ಮಾಡಲು ಬಯಸುವ, ವೇಗವಾಗಿ ಹಣ ಮಾಡುವ ಉಪಾಯದತ್ತ , ಐಫೋನ್ 13 ಬಿಡುಗಡೆಯಾದಾಗಿನಿಂದಲೂ ಅದರ ಮೇಲೆ ಕಣ್ಣಿಟ್ಟಿರುವ ನಮ್ಮಂಥ ಮಧ್ಯಮ ವರ್ಗದವರು ಗಮನ ಹರಿಸುತ್ತೇವೆ.

ಹೀಗಾಗಿ ನಾವು, ನಮ್ಮ ಜೀವಮಾನದ ಉಳಿತಾಯವನ್ನು ತುಂಡು ತುಂಡು ಮಾಡಿ ವಿನಿಯೋಗಿಸುವ ಬದಲು ಈ ಕೆಳಗಿನ ಏಳು ಹಣ ಉಳಿತಾಯ ಸವಾಲುಗಳನ್ನು ಎದುರಿಸಲು ಸಿದ್ಧವಾದರೆ ನಮ್ಮ ಉಳಿತಾಯದಲ್ಲಿ ದೊಡ್ಡ ವ್ಯತ್ಯಾಸವೇ ಸಾಧ್ಯವಾಗಲಿದೆ:

 ಮೂರು ತಿಂಗಳ ಕಾಲ ಅನಗತ್ಯ ವೆಚ್ಚಗಳಿಗೆ ಕಡಿವಾಣ:

 ಖರೀದಿ ಗೀಳಿನ ವ್ಯಕ್ತಿಗಳ ಪಾಲಿನ ದುಸ್ವಪ್ನವೆಂದರೆ, ಪ್ರತಿ ಪೋಷಕರೂ ನೀಡುವ ‘ಹಣವನ್ನು ವ್ಯರ್ಥ ಮಾಡಬೇಡ!” ಎಂಬ ಚಿನ್ನದಂಥ ಸಲಹೆ. ನೀವೊಂದು ವೇಳೆ ಮೂರು ತಿಂಗಳ ಕಾಲ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದರೆ, ನೀವು ನೈಜ ಉಳಿತಾಯದ ಬಹುಮಾನ ಪಡೆಯುತ್ತೀರಿ.

ನೀವು ಕೆಟ್ಟ ದಿನಗಳನ್ನು ಎದುರಿಸುತ್ತಿದ್ದೀರಿ ಎಂಬ ಒಂದೇ ಕಾರಣಕ್ಕೆ ನಿಮ್ಮ ಖರೀದಿ ಪಟ್ಟಿಗೆ ಬೇರೇನನ್ನೂ ಸೇರಿಸಬೇಡಿ. ಆದರೆ, ಖಂಡಿತವಾಗಿ ನಿಮ್ಮ ನಿಯಮಿತ ವೆಚ್ಚಗಳಾದ ಬಾಡಿಗೆ ತೆರುವುದು, ಇಂಧನ ವೆಚ್ಚ, ಬಿಲ್‍ಗಳ ಶಿಲ್ಕನ್ನು ಪಾವತಿಸುವುದು ಹಾಗೂ ದಿನಸಿ ಪದಾರ್ಥಗಳನ್ನು ಖರೀದಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಹೊರಗಡೆ ಸೇವಿಸುವುದು, ಸ್ವಿಗ್ಗಿಯಲ್ಲಿ ಖರೀದಿ ಆದೇಶ ನೀಡುವುದು, ಮುಂಜಾನೆ ಸ್ಟಾರ್‍ಬಕ್ಸ್‍ಗೆ ಹೋಗುವುದು, ಅತಿಯಾದ ಶಾಪಿಂಗ್‍ ಈ ಸವಾಲಿನ ಅವಧಿಯಲ್ಲಿ ಖಂಡಿತ ಬೇಡ, ಬೇಡ.

ಮೂರು ತಿಂಗಳ ಸವಾಲನ್ನು ನೀವು ಯಶಸ್ವಿಯಾಗಿ ಪೂರೈಸಿದರೆ, ನಿಮ್ಮ ಅನಗತ್ಯ ವೆಚ್ಚಗಳಿಗೆ ಕಡಿವಾಣ ಬಿದ್ದು, ಮೂರು ತಿಂಗಳ ಕೊನೆಯಲ್ಲಿ ಅದರ ಫಲವನ್ನು ನೀವು ಪಡೆಯುತ್ತೀರಿ.

ನಿಮಗೆ ನಂಬಿಕೆ ಬರುತ್ತಿಲ್ಲವೆ? ಹಾಗಾದರೆ ನೀವು ಆಯವ್ಯಯದ ಮೇಲೆ ನಿಗಾವನ್ನು ಅಳವಡಿಸಿಕೊಳ್ಳಿ. ಈ ನಿಗವು ನಿಮ್ಮ ವೆಚ್ಚದ ಮೇಲೆ ಕಣ್ಣಿಡುತ್ತದೆ ಮತ್ತು 90 ದಿನಗಳ ಅವಧಿಯಲ್ಲಿ ನೀವು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯ ಮಾಡಿರುವ ಹಣದ ವಿವರವನ್ನು ನೀಡುತ್ತದೆ!

ವಾರಾಂತ್ಯದ ಮೋಜನ್ನು ಕಡಿತಗೊಳಿಸಿ:

 ಒಂದು ವೇಳೆ ನೀವು ಕಠಿಣ ಹಾಗೂ ಆಯಾಸಕರ ವಾರವನ್ನು ಅನುಭವಿಸಿದ್ದರೆ, ನಿಮ್ಮ ಗೆಳೆಯರೊಂದಿಗೆ ಕುಡಿಯಲು ಹೋಗುವುದು ಅಥವಾ ನಿಮ್ಮ ಸಂಗಾತಿಯೊಂದಿಗೆ ವಾರಾಂತ್ಯದ ರಜೆ ಮೇಲೆ ತೆರಳುವುದು ಸಮರ್ಪಕ ಹಾಗೂ ಸ್ವಂತ ಆರೈಕೆಯನ್ನು ಸೂಚಿಸುತ್ತದೆ, ನಿಜ.

ಇವೆಲ್ಲ ಉತ್ತಮವಾಗಿಯೇ ಕಂಡು ಬಂದರೂ, ಈ ಪ್ರಕ್ರಿಯೆಯಲ್ಲಿ ನಿಮ್ಮ ಉಳಿತಾಯವನ್ನು ಮುಕ್ಕಾಗಿಸುತ್ತದೆ. ಹೆಚ್ಚುವರಿ ಖರ್ಚು ಮಾಡಿಸಿ, ನಿಮ್ಮ ಜೇಬಿಗೆ ಕತ್ತರಿ ಹಾಕದಂಥ ಪರ್ಯಾಯ ಚಾಣಾಕ್ಷ ಉಪಾಯಗಳನ್ನು ಹುಡುಕಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.

ನಿಮ್ಮ ನಗರವನ್ನು ಅನ್ವೇಷಿಸುವುದು, ದೂರದ ನಡಿಗೆಗೆ ಹೆಜ್ಜೆ ಹಾಕುವುದು ಅಥವಾ ಸುಮ್ಮನೆ ನೋಡುತ್ತಾ ಸಾಗುವುದು ನೀವು ನಿಮ್ಮ ವಾರದ ದಿನಗಳನ್ನು ಎಷ್ಟು ಅರ್ಥಪೂರ್ಣ ಚಟುವಟಿಕೆಗಳಲ್ಲಿ ಕಳೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ. ಇದರಿಂದ ವಾರಾಂತ್ಯದಲ್ಲಿ ನೀವು ಪ್ರತಿ ಖರೀದಿಯ ಮೇಲೆ ಬೇಕಾಬಿಟ್ಟಿ ಕ್ರೆಡಿಟ್ ಕಾರ್ಡ್ ಬಳಸುವುದು ತಪ್ಪುತ್ತದೆ.

ವಿದ್ಯುತ್‍ ಅನ್ನು ಹೆಚ್ಚಾಗಿ ಬಳಸುವ ಸಾಮಗ್ರಿಗಳನ್ನು ಆರಿಸಿಡಿ:

 ನಿಮ್ಮ ಮನೆಯಲ್ಲಿ ಬಳಕೆಯಾಗುವ ಅತಿಯಾದ ವಿದ್ಯುತ್ ಅನ್ನು ಪತ್ತೆ ಹಚ್ಚುವುದು ಸಾಧ್ಯವಾದರೆ, ನೀವು ನಿಮ್ಮ ಹಣ ಉಳಿತಾಯ ಮಾಡಬಹುದು. ಅದೇ ಹೊತ್ತಿನಲ್ಲಿ ನಿಮ್ಮ ಇಂಗಾಲದ ಹೆಜ್ಜೆಯನ್ನು ತಗ್ಗಿಸಬಹುದು (ವಿದ್ಯುತ್‌  ತಯಾರಿಕೆಗೆ ಇಂಗಾಲದ ಬಿಡುಗಡೆ ಅಗತ್ಯವಾಗಿರುತ್ತದೆ ಎಂಬುದನ್ನು ನೆನಪಿಡಿ).

ಫೋನ್ ಚಾರ್ಜರ್ಗಳು, ಲ್ಯಾಪ್ಟಾಪ್ ಕಾರ್ಡ್ಗಳು, ಕಾಫಿ ಯಂತ್ರಗಳಂಥ ವಿದ್ಯುನ್ಮಾನ ಸಾಮಗ್ರಿಗಳು ಅಧಿಕ ವಿದ್ಯುತ್ ಪೋಲು ಮಾಡುವುದಕ್ಕೆ ಹೆಸರುವಾಸಿಯಾಗಿವೆ. ಯಾಕೆಂದರೆ, ಆ ಎಲ್ಲ ಸಾಧನಗಳು ಹೆಚ್ಚು ವಿದ್ಯುತ್ ಅನ್ನು ಬಳಸುತ್ತವೆ.

ಈ ವಿದ್ಯುನ್ಮಾನ ಮತ್ತು ಗೃಹೋಪಯೋಗಿ ಸಾಮಗ್ರಿಗಳು ಬಳಕೆಯಲ್ಲಿಲ್ಲದಾಗ ಆರಿಸಿಡುವುದರಿಂದ ನೀವು ಇಂಧನವನ್ನೂ ಸಂರಕ್ಷಿಸಬಹುದು ಹಾಗೆಯೇ ಹಣವನ್ನೂ ಉಳಿತಾಯ ಮಾಡಬಹುದು. ನೀವು ಚಾಣಾಕ್ಷ ವಿದ್ಯುತ್ ಕೇಬಲ್‍ಗಳನ್ನು ಬಳಸಿದರೆ ಮತ್ತು ಡೆಸ್ಕ್‍ಟಾಪ್ ಕಂಪ್ಯೂಟರ್‍ಗಳಂಥ ಗ್ಯಾಜೆಟ್‍ಗಳನ್ನು ಸ್ಲೀಪ್ ಮೋಡ್‍ನಲ್ಲಿಟ್ಟರೆ ಶೇ. 20ರಷ್ಟು ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಬಹುದಾಗಿದೆ.

ಈ ಸಲಹೆ ನೈಜ ಪಂದ್ಯ ಉಳಿಸುವ ಸಲಹೆಯಂತೆ ನಿಮಗೆ ಕಾಣಿಸದಿದ್ದರೂ, ಖಂಡಿತವಾಗಿ ನಿಮ್ಮ ವಾರ್ಷಿಕ ವಿದ್ಯುತ್ ಬಿಲ್‍ ವೆಚ್ಚವನ್ನು ಉಳಿಸುತ್ತದೆ. ಇದರರ್ಥ ನೀವು ಅತ್ಯವಶ್ಯಕ ವೆಚ್ಚಗಳಿಂದಲೂ ಹಣ ಉಳಿತಾಯ ಮಾಡಿದಂತೆ ಅಲ್ಲವೆ?

ದೈನಂದಿನ ವೆಚ್ಚದ ಮೇಲೆ ನಿಗಾ ವಹಿಸಿ: 

ನೀವು ದಿನ ನಿತ್ಯ ವೆಚ್ಚ ಮಾಡುವ ಪಟ್ಟಿಯನ್ನು ತಯಾರಿಸಿಟ್ಟುಕೊಳ್ಳಿ. ನಿಮ್ಮ ಅಗತ್ಯಕ್ಕೆ ತಕ್ಕನಾದ ಆಯವ್ಯಯ ಉಪಕರಣ ಅಥವಾ ತಂತ್ರಾಂಶದ ಮೂಲಕ ನಿಮ್ಮ ದಿನ ನಿತ್ಯದ ವೆಚ್ಚದ ಮೇಲೆ ನಿಗಾ ವಹಿಸಿ. ಇದರಿಂದ ನೀವು ಯಾವ ವಿಭಾಗದಲ್ಲಿ ಹಣ ಉಳಿತಾಯ ಮಾಡಬಹುದು ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಹಣ ಎಲ್ಲ ವ್ಯಯವಾಗುತ್ತಿದೆ ಎಂದು ತಿಳಿದುಕೊಂಡರೆ ಅದನ್ನು ಉಳಿಸುವುದು ಸಾಧ್ಯವಾಗುತ್ತದೆ. ನಿಮ್ಮ ದೈನಂದಿನ ವೆಚ್ಚದ ಮೇಲೆ ನಿಗಾ ಇಡಲು ಸಾಧ್ಯವಾಗದಿದ್ದರೆ, ಹಣದ ಕುರಿತ ನಿಮ್ಮ ಕಳವಳ ದ್ವಿಗುಣಗೊಳ್ಳುತ್ತದೆ.

ನೀವು ಈ ಕಳವಳವನ್ನು ದೂರ ಮಾಡಿಕೊಳ್ಳಬೇಕಿದ್ದರೆ, ನೀವು ಚಾಣಾಕ್ಷ ದೈನಂದಿನ ಉಳಿತಾಯ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. 

ಜಾರ್ ನಂತಹ  ಆ್ಯಪ್‍ಗಳು ನಿಮ್ಮ ದೈನಂದಿನ ವೆಚ್ಚವನ್ನು ನಿಗದಿಗೊಳಿಸುತ್ತವೆ ಮತ್ತು ಶೇ. 100ರಷ್ಟು ಡಿಜಿಟಲ್‍ ಗೋಲ್ಡ್  ಯೋಜನೆಯಲ್ಲಿ ತೊಡಗಿಸುತ್ತವೆ. ಇದರರ್ಥ ಏಕಕಾಲದಲ್ಲಿ ವೆಚ್ಚ ಮತ್ತು ಉಳಿತಾಯ ಎರಡನ್ನೂ ಮಾಡುವುದು ಎಂದು!

ಖರೀದಿಗೂ ಮುನ್ನ 30 ದಿನ ತಡೆಯಿರಿ: 

ನೈಕಾ ಸಂಸ್ಥೆಯು ತನ್ನ ಪ್ರಸಾಧನ ಉತ್ಪನ್ನಗಳ ಮೇಲೆ ಶೇ. 50ರಷ್ಟು ರಿಯಾಯಿತಿ ನೀಡುತ್ತದೆ. ಕೊಟ್ಟಕೊನೆಗೆ ಪಿಎಸ್‍5 ದಾಸ್ತಾನು ಅಮೆಜಾನ್‍ನಲ್ಲಿ ಲಭ್ಯವಿದೆ.

ಈ ಯಾವುದಾದರೂ ನಿಮ್ಮಲ್ಲಿ ಕೈಕೆರೆತ ಉಂಟು ಮಾಡುತ್ತದೆಯೆ ಮತ್ತು ಸ್ಮಾರ್ಟ್‍ಫೋನ್ ಅನ್ನು ಖರೀದಿಸಲೇಬೇಕು ಎಂಬ ಉಮೇದು ಸೃಷ್ಟಿಸುತ್ತದೆಯೆ? ಹಾಗಾದರೆ ಭವಿಷ್ಯದಲ್ಲಿ ಇಂತಹ ತುರ್ತು ಖರೀದಿಯನ್ನು ಮಾಡದಂತೆ ತಡೆಯುವ ಮಾರ್ಗವೊಂದು ಇಲ್ಲಿದೆ.

ಅದೆಂದರೆ, 30 ದಿನಗಳ ಕಾಲ ಏನನ್ನೂ ಖರೀದಿ ಮಾಡುವುದಿಲ್ಲ ಎಂಬ ನಿಯಮವನ್ನು ಅಳವಡಿಸಿಕೊಳ್ಳಿ! ಈ ಮೂವತ್ತು ದಿನಗಳ ನಿಯಮವು ನೀವು ತುರ್ತು ಖರೀದಿ ಮಾಡುವುದರಿಂದ ತಡೆಯುತ್ತದೆ ಮತ್ತು ಹೆಚ್ಚು ಹಣವನ್ನು ಉಳಿತಾಯ ಮಾಡುತ್ತದೆ. ಇದರಿಂದ ನಿಮ್ಮ  ಬೇಡಿಕೆಗೆ ಪ್ರತಿಯಾಗಿ ಅಗತ್ಯತೆ ಸುಧಾರಣೆಗೊಳ್ಳುತ್ತದೆ.

ಇದಕ್ಕೆಲ್ಲ ನೀವು ಮಾಡಬೇಕಿರುವ ಒಂದೇ ಕೆಲಸ: ಖರೀದಿಯಿಂದ ದೂರ ಉಳಿಯುವುದು, ಜೊಮೆಟೊ ಸತ್ಕಾರವನ್ನು ತಪ್ಪಿಸುವುದು ಮತ್ತು ಮೃಷ್ಟಾನ್ನ ಭೋಜನಗಳನ್ನು ಬಡಿಸದೆ ಇರುವುದು.

ಈ ನಿಯಮದಿಂದ ನಿಮಗೆ ಎರಡು ಲಾಭವಿದೆ: ನಿಮಗೆ ಯಾವುದು ಅಗತ್ಯ ವಸ್ತುವಲ್ಲವೊ ಅದರ ಮೇಲಿನ ವೆಚ್ಚವನ್ನು ನಿಯಂತ್ರಿಸುತ್ತೀರಿ ಮತ್ತು ನೀವೀಗಾಗಲೇ ಸೃಷ್ಟಿಸಿಕೊಂಡಿರುವ ಆಯವ್ಯಯವನ್ನು ಹಿಂಬಾಲಿಸಬಹುದಾಗಿದೆ.

   

ಯುದ್ಧವನ್ನು ಕೈಬಿಡಿ

ಇದಕ್ಕಿಂತ ಪ್ರಶಂಸೆಗೊಳಗಾಗಬಲ್ಲ ರದ್ದತಿ ಸಂಸ್ಕೃತಿ ಮತ್ತೊಂದಿಲ್ಲ. ನಿಯಂತ್ರಣವಿಲ್ಲದ ಮನೋರಂಜನೆ ಮತ್ತು ಸಂಗೀತ ಚಂದಾದಾರಿಕೆಯನ್ನು ಪರೀಕ್ಷಿಸಿ, ಅವು ನಿಮ್ಮ ಆಯವ್ಯಯದ ಮೇಲೆ ಹೇರುತ್ತಿರುವ ಹೊರೆಯನ್ನು ಪರಿಶೀಲಿಸಿ.

ಈ ಕ್ಷಣದಲ್ಲಿ ನೀವು ಅನವಶ್ಯಕ ಚಂದಾದಾರಿಕೆಯಿಂದ ಹೊರಬರಲು ನಿರ್ಧರಿಸಿ. ವಿಶೇಷವಾಗಿ ಅಂತರ್ಜಾಲದಲ್ಲಿ ಆರು ತಿಂಗಳ ಹಿಂದೆ ಟ್ರೆಂಡಿಂಗ್‍ನಲ್ಲಲಿದ್ದ ಧಾರಾವಾಹಿಯನ್ನು ನೋಡಲು ಮಾಡಿಸಿದ್ದ ಚಂದಾದಾರಿಕೆಯಿಂದ ಹೊರಬನ್ನಿ. 

ನಿಮ್ಮ ವೆಚ್ಚದ ಬಹುಪಾಲನ್ನು ತಿಂದು ಹಾಕುತ್ತಿರುವ ನಿಮ್ಮ ಮಾಸಿಕ ಚಂದಾದಾರಿಕೆಯ ಮೇಲೆ ಹತ್ತಿರದಿಂದ ಗಮನಿಸಿ ಮತ್ತು ನಿಮಗೆ ಯಾವುದೇ ರೀತಿಯಲ್ಲೂ ಉಪಯೋಗವಿಲ್ಲದ ಚಂದಾದಾರಿಕೆಯನ್ನು ರದ್ದುಗೊಳಿಸಿ.

ಇದರಿಂದ ನೀವು ತಿಂಗಳೊಂದರಲ್ಲಿ ಕೇವಲ ಒಂದೆರಡು ನೂರು ರೂಪಾಯಿಯನ್ನು ಮಾತ್ರ ನಿಮಗೆ ಅಗತ್ಯವಾದ ಸೇವೆಗಳಿಗೆ ವ್ಯಯಿಸಲು ಸಾಧ್ಯವಾಗುತ್ತದೆ. ಹಾಗೂ ಈ ಸೇವೆಯು ನಿಮ್ಮ ಕಠಿಣ ಪರಿಶ‍್ರಮದಿಂದ ಸಂಪಾದಿಸಿದ ಹಣಕ್ಕೆ ತಕ್ಕ ಮೌಲ್ಯವಾಗಿರುತ್ತದೆ.

  

ನಿಮ್ಮ ಮನೆಯಲ್ಲೇ ಆಹಾರ ಸೇವಿಸಿ

ನಾವು ನಮ್ಮ ಅಧಿಕ ವೆಚ್ಚ ಮತ್ತು ಉಳಿತಾಯದ ಕೊರತೆ ಬಗ್ಗೆ ದೂರಿದಾಗಲೆಲ್ಲ ನಮ್ಮ ಪೋಷಕರು ನಿಜವಾಗಿಯೂ ನೀಡುವ ಅತ್ಯುತ್ತಮ ಸಲಹೆಯಿದು. 

ಮನೆಯಲ್ಲಿ ನಿಯಮಿತವಾಗಿ ಅಡುಗೆ ತಯಾರಿಸಿ ಸೇವಿಸುವುದು ನಿಜಕ್ಕೂ ಉತ್ತಮ ಅಭ್ಯಾಸವಾಗಿದ್ದು, ಹಣವನ್ನು ಉಳಿತಾಯ ಮಾಡುವ ಅತ್ಯಂತ ಸರಳ ದೈನಂದಿನ ಉಳಿತಾಯ ಯೋಜನೆಯಾಗಿದೆ.

ನೀವು ಆಹಾರ ಪ್ರಿಯರಾಗಿದ್ದರೆ, ಆಹಾರದ ಮೇಲೆ ಹೆಚ್ಚು ವೆಚ್ಚ ಮಾಡಲು ಬಯಸುವವರಾಗಿದ್ದರೆ ನೀವು ಪ್ರತಿ ಬಾರಿಯೂ ಪಡೆಯುವ ಅವಕಾಶ ಇದಾಗಿದ್ದು, ಇದು ನಿಮಗಾಗಿಯೇ ಇದೆ!

ನೀವು ಹೊರಗಡೆ ಆಹಾರ ಸೇವನೆ ಮಾಡುತ್ತಿರುವವರಾಗಿದ್ದರೆ, ಆರಂಭದಲ್ಲಿ ಮನೆಯಲ್ಲಿ ತಯಾರಾದ ಊಟವನ್ನು ಸೇವಿಸುವುದು ಕೊಂಚ ಕಷ್ಟವೇ ಆಗುತ್ತದೆ. ಆದರೆ, ಇದು ಖಂಡಿತ ಸಾಧಿಸಲು ಸಾಧ್ಯವಾದ ಸಂಗತಿಯಾಗಿದ್ದು, ಅದಕ್ಕಾಗಿ ನೀವು ಅಭ್ಯಾಸವೊಂದನ್ನು ರೂಢಿಸಿಕೊಳ್ಳಬೇಕು.

ಈ ಮಾರ್ಗದಿಂದ ನೀವು ರಾತ್ರಿ ಊಟಕ್ಕಾಗಿ ಮತ್ತು ತಡರಾತ್ರಿ ಮೋಜಿಗಾಗಿ ವ್ಯಯಿಸುವ ಕೆಲವು ಸಾವಿರ ರೂಪಾಯಿಗಳನ್ನು ತಿಂಗಳೊಂದಕ್ಕೆ ಉಳಿತಾಯ ಮಾತ್ರ ಮಾಡುವುದಿಲ್ಲ ಬದಲಿಗೆ, ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹವನ್ನು ಅದು ಬಯಸುವಂತೆ ಉತ್ತಮವಾಗಿ ಇಟ್ಟುಕೊಳ್ಳಬಹುದಾಗಿದೆ. 

ಈ ಸಲಹೆಗಳಿಂದ ನೀವು ನಿಮ್ಮ ಹಣವನ್ನು ಚಾಣಾಕ್ಷವಾಗಿ ಉಳಿತಾಯ ಮಾಡಬಹುದು ಮತ್ತು ಖಂಡಿತವಾಗಿ ನೀವು ದೀರ್ಘಕಾಲದಲ್ಲಿ ಉತ್ತಮ ಬದಲಾವಣೆಯನ್ನು ತಂದುಕೊಳ್ಳಬಹುದು.

ನೀವು ಚಾಣಾಕ್ಷತೆಯಿಂದ ಹಣ ಉಳಿತಾಯ ಮಾಡುತ್ತಿರುವುದನ್ನು ಖಾತ್ರಿಗೊಳಿಸಿಕೊಳ್ಳಲು ದೈನಂದಿನ ಉಳಿತಾಯ ಆ್ಯಪ್ ಅನ್ನು ಬಳಸಿ. ಇದು ನಿಮ್ಮ ದೈನಂದಿನ ವೆಚ್ಚ ಮತ್ತು ಸಮಯದ ಮೇಲೆ ನಿಗಾ ಇಡುತ್ತದೆ ಮತ್ತು ನೀವು ಹೊರಗೆ ತೆರಳಿದ್ದಾಗ ಮತ್ತು ಏನನ್ನಾದರೂ ಖರೀದಿಸಲು ಬಯಸಿದಾಗ ಉತ್ತಮ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವು ನೀಡುತ್ತದೆ. 

Subscribe to our newsletter
Thank you! Your submission has been received!
Oops! Something went wrong while submitting the form.