Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಆಗರ್ಭ ಶ್ರೀಮಂತರಿಂದ ಅಮೂಲ್ಯ ಆರ್ಥಿಕ ಸಲಹೆಗಳನ್ನು ಪಡೆದು ಜ್ಞಾನಿಗಳಾಗಿ ಹಾಗೂ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಇದರ ಲಾಭಗಳನ್ನು ಪಡೆಯಿರಿ.
ಕೋಟ್ಯಾಧೀಶರಾಗುವ ಹಿಂದೆ ಇರುವ ರಹಸ್ಯವನ್ನು ನಾವೆಲ್ಲರೂ ತಿಳಿಯಬಯಸುತ್ತೇವೆ, ಅಲ್ಲವೇ? ವಿಶ್ವದ ಆಗರ್ಭ ಶ್ರೀಮಂತರು ಹೇಗೆ ಯೋಚಿಸುತ್ತಾರೆ, ತಮ್ಮ ಹಣವನ್ನು ಹೇಗೆ ನಿರ್ವಹಿಸುತ್ತಾರೆ ಅವರ ನಡವಳಿಕೆ ಹೇಗಿರುತ್ತದೆ ಎಂದು ನಾವು ತಿಳಿಯಬೇಕಾಗಿದೆ.
ನಿಮ್ಮ ಆರ್ಥಿಕ ಪರಿಸ್ಥಿಗೆ ಹೇಗೇ ಇದ್ದರೂ, ನೀವು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದು, ಹಾಗೂ ಶ್ರೀಮಂತರಿಂದ ಸಿಗುವ ವೈಯಕ್ತಿಕ ಆರ್ಥಿಕ ಸಲಹೆಗಳೂ ಬಹುತೇಕ ಎಂತಹ ಸಂದರ್ಭಗಳಲ್ಲೂ ಉಪಯುಕ್ತವಾಗಿರುತ್ತದೆ.
ಆದ್ದರಿಂದ ಹಣದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಬದಲಿಸಿ ಅದನ್ನು ಈ ಶ್ರೀಮಂತರೊಂದಿಗೆ ಹೊಂದಿಸಲು ಸಿದ್ಧರಾಗಿ!
ನಿಮ್ಮ ಧನದ ನಿರ್ವಾಹಕರನ್ನೂ ಈರ್ಷ್ಯೆಗೆ ಒಳಪಡಿಸಬಲ್ಲ ಶ್ರೀಮಂತರ ಕೆಲ ಜೀವನದ ಅನುಭವಗಳು ಹಾಗೂ ಆರ್ಥಿಕ ಸಲಹೆಗಳಿಗೆ ನೀವು ತಯಾರಾಗಿದ್ದೀರೇ?
ಕಾರ್ಲೊಸ್ ಸ್ಲಿಮ್ ಹೆಲು, $73.3ಬಿಲಿಯನ್ ಆಸ್ತಿ ಹೊಂದಿರುವ ಮೆಕ್ಸಿಕೋದ ಅತೀ ಶ್ರೀಮಂತ ವ್ಯಕ್ತಿ, ಒಮ್ಮೆ ಹೇಳಿದ್ದರು, “ ಆದಷ್ಟು ಬೇಗ ಹಣವನ್ನು ಪಕ್ಕಕ್ಕಿಡಲು ಆರಂಭಿಸಿ” ಎಂದು.
ನೀವು ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿದ್ದರೂ, ನೀವು ಎಷ್ಟು ಬೇಗ ನಿಮ್ಮ ಹಣದ ಉಳಿತಾಯ ಹಾಗೂ ನಿರ್ವಹಣೆಯನ್ನು ಆರಂಭಿಸುತ್ತೀರೋ, ಜೀವನದ ನಂತರದ ಹಂತದಲ್ಲಿ ನೀವು ಅಷ್ಟೇ ಉತ್ತಮ ಸ್ಥಿತಿಯಲ್ಲಿರುತ್ತೀರಿ.
ಅವರು 12 ವಯಸ್ಸಿನಿಂದಲೇ ಮೆಕ್ಸಿಕನ್ ಬ್ಯಾಂಕಿನಲ್ಲಿ ಹೂಡಿಕೆ ಆರಂಭಿಸಿದ್ದರು, ಹದಿಹರೆಯದಲ್ಲಿ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರತಿ ವಾರ 200 ಪೆಸೊಗಳನ್ನು ಗಳಿಸುತ್ತಿದ್ದರು .
ವಾರನ್ ಬಫೆಟ್, ಎಲ್ಲಾ ಕಾಲಗಳ ಅತೀ ಯಶಸ್ವೀ ಹೂಡಿಕೆದಾರರು, 1957 ರಲ್ಲಿ ಅವರು ಖರೀದಿಸಿದ $31,500 ಬೆಲೆಯ ಮನೆಯಲ್ಲಿ ಮಿತವ್ಯಯಿಯಾಗಿ ವಾಸಿಸುತ್ತಿದ್ದಾರೆ. ಅವರ ಬಳಿ ಯುವಜನೆತೆಗೆ ಒಂದು ಜನಪ್ರಿಯ ಸಂದೇಶವಿದೆ -”ನಿಮ್ಮಷ್ಟೇ ಸರಳವಾಗಿರುವ ಬಾಳನ್ನು ಬದುಕಿ ಎಂದು.” ನೀವೊಂದು ಆರ್ಥಿಕ ಟ್ರೆಡ್ ಮಿಲ್ ನಲ್ಲಿದ್ದೀರಿ, ನೀವು ಯಾವತ್ತೂ ಅನಗತ್ಯ ವಸ್ತುಗಳ ಹುಡುಕಾಟದಲ್ಲಿದ್ದರೆ ಅದು ಎಂದಿಗೂ ಮೇಲೆ ಏರುವುದಿಲ್ಲ.
ಅವರ ಯಾವತ್ತೂ ‘ನಿಮ್ಮ ಬಲವಾದ ಆಸಕ್ತಿಯನ್ನು ಅರಸಿ’ ಎಂಬ ಮಾತಿನ ಮೇಲೆ ಫೋಕಸ್ ಮಾಡುತ್ತಾರೆ. ಅವರು ಹೇಳುವುದೇನೆಂದರೆ ನೀವು ಒಂದು ಕೂಲಿ ಕಾರ್ಮಿಕನಾಗಿ ಬದುಕುತ್ತಿದ್ದರೂ, ನಿಮ್ಮ ತೀವ್ರವಾದ ಆಸಕ್ತಿಯನ್ನು ಗುರುತಿಸಿ ಅದಕ್ಕಾಗಿ ಸಮಯ ಮೀಸಲಿಡಿ ಎಂದು. ಇದು ಯಶಸ್ಸನ್ನು ಪಡೆಯುವ ಒಂದು ಉತ್ತಮ ಮಾರ್ಗವಾಗಿದೆ.
ಇವತ್ತಿನ ಸ್ಪರ್ಧಾತ್ಮಕ ಸಮಾಜದಲ್ಲಿ, ನೀವು ಮಾಡುವ ಕೆಲಸ ನಿಮಗೆ ಸಂತೋಷ ನೀಡದಿದ್ದರೆ, ನೀವು ಈ ಎರಡರಲ್ಲೂ ನಷ್ಟ ಅನುಭವಿಸುತ್ತೀರಿ - ನೌಕರಿ ಮಾರುಕಟ್ಟೆ ಹಾಗೂ ಮಾರುಕಟ್ಟೆ.
ಇಂಗ್ವಾರ್ ಕಾಮ್ಪ್ರಾಡ್, ಐಕಿಯಾ ದ ಸ್ಥಾಪಕರು, ನಿಮ್ಮ ಬಳಿ ಖರ್ಚು ಮಾಡಲು ಎಷ್ಟೇ ಹಣವಿರಲಿ ಆದರೆ ಕೆಲವು ವೆಚ್ಚಗಳು ಅನಾವಶ್ಯಕ ಎಂದು ನಂಬುತ್ತಾರೆ.
ಹಲವು ಆಗರ್ಭ ಶ್ರೀಮಂತರಂತೆ, ಅವರು ಕೂಡಾ, ಖಾಸಗೀ ವಿಮಾನದ ಬದಲು ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ ಹಾಗೂ ಹತ್ತು ವರ್ಷ ಹಳೆಯ ವೊಲ್ವೋ ಓಡಿಸುತ್ತಾರೆ.
“ನಮಗೆ ಚಮಕಿನ ಕಾರುಗಳು, ಆಕರ್ಷಕ ಬಿರುದುಗಳು, ಸಮವಸ್ತ್ರ ಅಥವಾ ಯಾವುದೇ ಸ್ಟೇಟಸ್ ಚಿಹ್ನೆಗಳು ಬೇಕಾಗಿಲ್ಲ. ನಾವು ನಮ್ಮ ಬಲ ಹಾಗೂ ಇಚ್ಛಾಶಕ್ತಿಗಳನ್ನು ಅವಲಂಬಿಸುತ್ತೇವೆ!”, ಕಾಂಪ್ರಾಡ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದರು.
ಅವರ ಆರ್ಥಿಕ ಸಲಹೆಯು ನಮ್ಮ ಅಗತ್ಯಗಳನ್ನು ನಮ್ಮ ಬೇಕುಗಳಿಂದ ಪ್ರತ್ಯೇಕಿಸುವುದರ ಮೇಲೆ ಒತ್ತು ನೀಡುತ್ತದೆ.
ಜಾನ್ ಡೊನಾಲ್ಡ್ ಮೆಕ್ ಆರ್ಥರ್, ಚಿಕಾಗೋ ದ ಬ್ಯಾಂಕರ್ಸ್ ಲೈಫ಼್ ಆಂಡ್ ಕ್ಯಾಶುವಲ್ಟಿ ಕಂಪನಿಯ ಏಕೈಕ ಷೇರ್ ಹೋಲ್ಡರ್ ಆಗಿದ್ದು 1978 ರಲ್ಲಿ ಅವರ ಸಾವಿನ ಸಮಯದಲ್ಲಿ ಅವರ ಆಸ್ತಿ $1 ಬಿಲಿಯನ್ ಆಗಿತ್ತು( ಇಂದು $3.7 ಆಗಿದೆ).
ಮೆಕ್ ಅರ್ಥರ್ ತಮ್ಮ ಕೆರಿಯರ್ ಅನ್ನು ಒಂದು ಸಣ್ಣ ಏಕೈಕ ಸ್ವಾಧೀನದಿಂದ ಆರಂಭಿಸಿ ಅದರ ಸುತ್ತಲೂ ತನ್ನ ವ್ಯವಹಾರವನ್ನು ಬೆಳೆಸಿದರು.
ಹಾಲಿವುಡ್ ಚಮಕ್ ಹಾಗೂ ಆಕರ್ಷಣೆಯು ಪರಮಾವಧಿಯಲ್ಲಿದ್ದ ಕಾಲದಲ್ಲಿ ಇವರು ಬದುಕಿದ್ದರೂ, ಮೆಕ್ ಅರ್ಥರ್ ಈ ಜ್ವರಕ್ಕೆ ಒಳಗಾಗದೆ ಸರಳ ಜೀವನಶೈಲಿಯನ್ನು ಅನುಸರಿಸುತ್ತಿದ್ದರು.
ಅವರು ಐಷಾರಾಮಗಳಿಗೆ ಎಂದಿಗೂ ಖರ್ಚು ಮಾಡಲಿಲ್ಲ, ಅವರಿಗೆ ಯಾವುದೇ ಪ್ರೆಸ್ ಏಜಂಟ್ ಗಳಿರಲಿಲ್ಲ, ಹಾಗೂ $25,000 ರ ವಾರ್ಷಿಕ ಬಜೆಟ್ ನಲ್ಲಿ ಬದುಕುತ್ತಿದ್ದರು.
“ಇತರರ ಹಣವನ್ನು ತಾತ್ಕಾಲಿಕವಾಗಿ ಬಳಸಲು ಹಣವನ್ನು ಪಾವತಿಸುವುದು ನಿಮ್ಮನ್ನು ಇನ್ನೂ ಬಡವನನ್ನಾಗಿಸುತ್ತದೆ.
ನಿಮ್ಮ ಹಣವನ್ನು ಇತರರಿಗೆ ತಾತ್ಕಾಲಿಕ ಬಳಕೆಗೆ ನೀಡಿ ಅದಕ್ಕಾಗಿ ಹಣ ಪಡೆಯುವುದು ನಿಮ್ಮನ್ನು ಇನ್ನೂ ಶ್ರೀಮಂತರನ್ನಾಗಿಸುತ್ತದೆ!
ಮಾಜೀ ವಾಲ್ ಸ್ಟ್ರೀಟ್ ಅನ್ವೇಷಕರಾದ, ಸ್ಟೇಸಿ ಜಾನ್ಸನ್, ಹೀಗೆನ್ನುತ್ತಾರೆ.
ಸ್ಟೇಸಿ ಎನ್ನುತ್ತಾರೆ ಅದು ನಿಮಗೆ ಬದುಕಲು ಸಹಾಯ ಮಾಡಿದರೆ ಸಾಲ ಪಡೆಯುವುದು ಅಷ್ಟೇನೂ ಕೆಟ್ಟ ವಿಚಾರವೇನಲ್ಲ ಆದರೆ ಆದಷ್ಟು ಅದನ್ನು ತಪ್ಪಿಸಬೇಕೆಂದು ಶಿಫಾರಸು ಮಾಡುತ್ತರೆ.
ನಿಮ್ಮ ಬಳಿ ಎಷ್ಟು ಕಡಿಮೆ ಸಾಲವಿರುತ್ತದೆಯೋ, ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೇ ಉತ್ತಮವಾಗಿರುತ್ತದೆ.
“ಯಾರೋ ಒಬ್ಬರು ಬಹಳ ಹಿಂದೆ ಒಂದು ಮರವನ್ನು ನೆಟ್ಟಿದ್ದರಿಂದ ಮತ್ತೊಬ್ಬರು ಇಂದು ಅದರ ನೆರಳಲ್ಲಿ ಕುಳಿತಿದ್ದಾರೆ”.
ವಾರೆನ್ ಬಫೆಟ್, ಬರ್ಕ್ ಷಯರ್ ಹಾಥ್ವೇ ನ ಸಿ ಇ ಒ, ಹೇಳಿದ ಮತ್ತೊಂದು ವಿಷಯ. ಇಲ್ಲಿ ಅವರ ಮಾತಿನ ಅರ್ಥವೇನೆಂದರೆ, ಅಲ್ಪಾವಧಿಯ ಸ್ಥಿರವಲ್ಲದ ಹೂಡಿಕೆಗಳಿಗಿಂತ ದೀರ್ಘಾವಧಿಯ ಸ್ಥಿರ ಹೂಡಿಕೆಗಳಿಗೆ ಆದ್ಯತೆ ನೀಡುವುದು ಉತ್ತಮ ಎಂದು.
ಅವರು ಕಡಿಮೆ ಮೌಲ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ, ಅದರ ಷೇರುಗಳನ್ನು ಇಟ್ಟುಕೊಳ್ಳುತ್ತಿದ್ದರು…ಎಂದೆಂದಿಗೂ.
ಯಶಸ್ವೀ ಹೂಡಿಕೆಯು ಒಂದು ಶೀಘ್ರ ಹಣವಂತರಾಗುವ ಕಾರ್ಯಕ್ರಮವಲ್ಲ ಎಂಬುವುದು ಅವರ ಸಲಹೆ. ನೀವು ಆಕರ್ಷಕ ಷೇರಿನ ಖರೀದಿ, ಹೊಚ್ಚ ಹೊಸ ಸ್ಟಾರ್ಟ್ ಅಪ್ ಗಳು, ಅಸಾಧಾರಣ ಲಾಭದ ಆಶ್ವಾಸನೆ ನೀಡುವ ಸಂಶಯಾಸ್ಪದ ಹೂಡಿಕೆಗಳಿಂದ ದೂರವಿರಬೇಕು.
ರಿಚರ್ಡ್ ಬ್ರ್ಯಾನ್ಸನ್, ಬ್ರಿಟಿಷ್ ಬಿಲಿಯನೇರ್ ಹಾಗೂ ವರ್ಜಿನ್ ಗ್ರೂಪ್ ನ ಸ್ಥಾಪಕ, ಇವರ ಆಸ್ತಿ $4 ಬಿಲಿಯನ್ ಆಗಿದೆ, ಇವರ ಬಳಿ ಹಿಂದೆ ಕೇವಲ ಗುರಿಗಳ ಒಂದು ಪಟ್ಟಿ ಇತ್ತು.
ಅವುಗಳು ಅಷ್ಟೇನು ವಾಸ್ತವಿಕವಾಗಿರದಿದ್ದರೂ, ಅವರು ಅದನ್ನು ಗೊತ್ತುಮಾಡಿ ಅದನ್ನು ಅರಸಿದರು. ಅವರ ಈ ಗುರು ಗೊತ್ತುವಿಕೆಯು ಒಂದು ದಿನ ಅವರನ್ನು ಎಲ್ಲಿ ಕರೆದೊಯ್ಯುತ್ತದೆ ಎಂದು ಅವರಿಗೆ ಊಹೆಯೂ ಇರಲಿಲ್ಲ.
ಇಂದು, ಈ ಕೋಟ್ಯಾಧಿಪತಿ ಅಂತರಿಕ್ಷದ ತುದಿಗೆ ಪ್ರಯಾಣಿಸಿದ್ದಾರೆ, ಇತ್ತೀಚಿಗಷ್ಟೇ 17 ವರ್ಷದ ಹಿಂದೆ ಅವರು ಆರಂಭಿಸಿದ ಪ್ರಾಜೆಕ್ಟ್ ನ ಸಾಂಕೇತಿಕ ಮೈಲಿಗಲ್ಲನ್ನು ಗುರುತಿಸುವ ಸಲುವಾಗಿ, ಹಾಗೂ ಹೊಸ ಯುಗದ ಅಂತರಿಕ್ಷ ಪ್ರವಾಸದ ಸೂತ್ರಧಾರಿಯಾಗಿದ್ದರು.
ಅವರ ಲಿಂಕ್ಡಿನ್ ನ್ಯೂಸ್ ಲೆಟರ್ ನಲ್ಲಿ, ಅವರು ಹೇಳಿದ್ದರು, “ ಸಂಶಯ ತಲೆಯೆತ್ತಿದಾಗ, ಕನಸುಗಳು ರೇಖೀಯವಾಗಿರುವುದಿಲ್ಲ ಎಂದು ನನಗೆ ನಾನೇ ನೆನಪಿಸುತ್ತೇನೆ”.
ಬಿಲ್ ಗೇಟ್ಸ್ ಯಾರಿಗೆ ಪರಿಚಯವಿಲ್ಲ? ಮೈಕ್ರೋಸಾಫ್ಟ್ ನ ಸ್ಥಾಪಕನ ಆಸ್ತಿಯು $150 ಬಿಲಿಯನ್ ಆಗಿದೆ, ಹಾಗೂ ಅವರ ಲೋಕೋಪಕಾರಿ ಕಾರ್ಯಗಳು ಜನಪ್ರಿಯವಾಗಿವೆ.
ಗೇಟ್ಸ್, ಇತರ ಕೋಟ್ಯಾಧೀಶರಂತೆಯೇ, ಅವರ ಹಣವನ್ನು ಸಾಗಿಸಲು ಬಯಸುತ್ತಾರೆ, ಬ್ಯಾಂಕ್ ನಲ್ಲಿ ಇಡಲು ಅಲ್ಲ.
“ ಈ ಹೆಚ್ಚಿನ ಹಣವು ನಗದು ರೂಪದಲ್ಲಿರುವ ರಕ್ಷಣಾತ್ಮಕ ಭಂಗಿಯಲ್ಲಿ ನಾವೇನೂ ಇಲ್ಲ”.
2019 ರ ಬ್ಲೂಮ್ಬರ್ಗ್ ನೊಂದಿಗಿನ ಮೀಟಿಂಗ್ ನಲ್ಲಿ, ಬಿಲ್ ಗೇಟ್ಸ್ ಅಂದಿದ್ದರು, ಇದರ ಜೊತೆ “ ಹೂಡಿಕೆಯಲ್ಲಿ ನಾನು ಅಳವಡಿಸಿದ ತಂತ್ರವೇನೆಂದರೆ ಇಕ್ವಿಟೀ ಗಳಲ್ಲಿ 60% ಅನ್ನೂ ಮೀರುವುದು” ಎಂದಿದ್ದರು.
ಅವರ ಆಸ್ತಿಯು ಆರ್ಥಿಕ ಸ್ವತ್ತುಗಳು, ರಿಯಲ್ ಎಸ್ಟೇಟ್, ಮತ್ತು ಸಂಗ್ರಹಣೆಗಳ ವಿಸ್ತಾರವಾದ ಹೂಡಿಕೆಯ ಮಿಶ್ರಿತ ಪೋರ್ಟ್ಫೋಲಿಯೋ ದಿಂದ ಸಂರಕ್ಷಿಸಲ್ಪಟ್ಟಿದೆ.
ಇದರ ಸುತ್ತ ಒಂದು ಜನಪ್ರಿಯ ಇಂಗ್ಲಿಷ್ ಗಾದೆಯೂ ಇದೆ- “ ನೀವು ನಿಮ್ಮ ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಬಾರದು”.
ಶ್ರೀಮಂತರು ಯಾವತ್ತೂ ತಮ್ಮ ಸಂಪೂರ್ಣ ಆಸ್ತಿಯನ್ನು ಒಂದು ಅಥವಾ ಎರಡು ಷೇರುಗಳಲ್ಲಿ ಹೂಡಿಕೆ ಮಾಡುವುದಿಲ್ಲ.
ಆದ್ದರಿಂದ ಹಲವು ಸ್ವತ್ತುಗಳು, ಷೇರುಗಳು, ಬಾಂಡ್ ಗಳು, ಮ್ಯೂಚುವಲ್ ಫಂಡ್ ಗಳು ಹಾಗೂ ಡಿಜಿಟಲ್ ಗೋಲ್ಡ್ ಅನ್ನು ಹೊಂದಿರುವ ಒಂದು ವಿಭಿನ್ನ ಪೋರ್ಟ್ಫೊಲಿಯೋ ಅನ್ನು ಹೊಂದುವುದು ಬಹಳ ಮುಖ್ಯವಾಗಿದೆ.
ವ್ಯವಹಾರದ ಸ್ವತ್ತುಗಳು, ರಿಯಲ್ ಎಸ್ಟೇಟ್ ಮತ್ತು ಸಂಗ್ರಹಣೆಗಳು ಇವೆಲ್ಲವೂ ನಿಮ್ಮ ಪೋರ್ಟ್ಫೋಲಿಯೋ ನ ಒಂದು ಭಾಗವಾಗಬಹುದು.
ಶ್ರೀಮಂತ ಹಾಗೂ ಯಶಸ್ವೀ ವ್ಯಕ್ತಿಗಳು ತಮ್ಮ ಅನುಭವದಿಂದ ನಮಗೆ ಸಾಕಷ್ಟು ವಿಷಯಗಳನ್ನು ಕಲಿಸಬಹುದು. ಇವರಲ್ಲಿ ಪ್ರತಿಯೊಬ್ಬರೂ ಮಾರುಕಟ್ಟೆಯ ನಾಯಕ ಹಾಗೂ ವಿದ್ಯಾರ್ಥಿ ಈ ಎರಡು ಗುರುತುಗಳನ್ನೂ ಹೊಂದಿದ್ದಾರೆ.
ನಾವೆಲ್ಲರು ಕಾರ್ಯನಿರ್ವಹಿಸಿ, ವಿಫಲರಾಗಿ, ಕಲಿತು ಜೀವನದಲ್ಲಿ ಮುನ್ನಡೆಯುತ್ತೇವೆ. ಇದು ನಮ್ಮನ್ನು ಅವಲಂಬಿಸಿದೆ, ಹಣದ ಬಗ್ಗೆ ನಮ್ಮ ದೃಷ್ಟಿಕೋನ ಹಾಗೂ ನಡವಳಿಕೆಯು ವ್ಯತ್ಯಾಸವನ್ನು ತರುತ್ತದೆ.
ಈಗ ಅತೀ ಶ್ರೀಮಂತರಿಂದ ಅತ್ಯಮೂಲ್ಯ ಆರ್ಥಿಕ ಸಲಹೆಯನ್ನು ಪಡೆದ ನಂತರ, ನೀವು ಇವುಗಳನ್ನು ನಿಮ್ಮ ಜೀವನದಲ್ಲಿ ಹೇಗೆ ಅಳವಡಿಸುತ್ತೀರಿ?