Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಚಿನ್ನದ ಮೇಲೆ ಹೂಡಿಕೆ ಮಾಡಲು ನಾವು ಹೊಸ ಮಾರ್ಗವೊಂದನ್ನು ಹೊಂದಿದ್ದೇವೆ: ಅದೇ ಡಿಜಿಟಲ್ ಗೋಲ್ಡ್. ಚಿನ್ನದಲ್ಲಿ ಹೂಡಿಕೆ ಮಾಡಲು ಇದೊಂದು ಸುರಕ್ಷಿತ, ಅನುಕೂಲಕರ ಮತ್ತು ಸುಲಭ ವಿಧಾನವಾಗಿದೆ. ನೀವು ಡಿಜಿಟಲ್ ಗೋಲ್ಡ್ ಅನ್ನು ಏಕೆ ಖರೀದಿಸಬೇಕು ಎಂಬುದು ಇಲ್ಲಿದೆ: ಮೌಲ್ಯಯುತವಾದ ಲೋಹವಾಗಿರುವ ಚಿನ್ನಕ್ಕೆ 3000 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಚಿನ್ನವನ್ನು ಭಾರತದಲ್ಲಿ "ದೇವರ ಹಣ" ಎಂದು ಪರಿಗಣಿಸಲಾಗುತ್ತದೆ.
ನಾವು ಅದನ್ನು ಉಡುಗೊರೆಯಾಗಿ, ಆಭರಣಗಳ ಜೊತೆಗೆ ಮನೆಯ ಆಸ್ತಿಯಾಗಿ ಬಳಸುತ್ತೇವೆ. ಮತ್ತು ದೇವಾಲಯಗಳು ಹಾಗೂ ಗುರುದ್ವಾರಗಳಂತಹ ಪೂಜಾ ಸ್ಥಳಗಳಿಗೆ ಉಡುಗೊರೆಯಾಗಿ ಕಾಣಿಕೆಯಾಗಿ ನೀಡುತ್ತೇವೆ.
ಇದರ ಪರಿಣಾಮವಾಗಿ, ಭಾರತವು ಪ್ರಸ್ತುತ ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರವಾಗಿದೆ.
ಈಗ, ಅನೇಕ ಜನರು ಆಭರಣ ಮಳಿಗೆಗಳನ್ನು ಅಥವಾ ಚಿನ್ನದ ವಿತರಕರನ್ನು ನೇರವಾಗಿ ಭೇಟಿ ಮಾಡಲು ಭಯಪಡುತ್ತಾರೆ. ವಿಶೇಷವಾಗಿ ಸಾಂಕ್ರಾಮಿಕ ರೋಗದ ನಂತರ ಇದು ಹೆಚ್ಚಾಗಿದೆ. ಆದ್ದರಿಂದ ಭಾರತೀಯರು ಚಿನ್ನದಲ್ಲಿ ಹೂಡಿಕೆ ಮಾಡಲು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ: ಅದೇ ಡಿಜಿಟಲ್ ಗೋಲ್ಡ್.
ಆನ್ಲೈನ್ನಲ್ಲಿ ಚಿನ್ನವನ್ನು ಖರೀದಿಸಲು ಈ ವೆಚ್ಚ-ಪರಿಣಾಮಕಾರಿ (cost-effective) ವಿಧಾನವು, ಅನೇಕ ಹೂಡಿಕೆದಾರರಿಗೆ ಕಾರ್ಯಸಾಧ್ಯವಾದ ಆಯ್ಕೆ ಎಂದು ಸಾಬೀತಾಗಿದೆ.
ಫಿಸಿಕಲ್ ವಿತರಣೆಯನ್ನು ತ್ವರಿತವಾಗಿ ಪಡೆಯುವ ಆಯ್ಕೆಯನ್ನು ಹೊಂದಿರುವಾಗ, ಚಿನ್ನದಲ್ಲಿ ಹೂಡಿಕೆಯ ಪ್ರಯೋಜನಗಳನ್ನು ಬಯಸುವ ಗ್ರಾಹಕರಿಗೆ ಇದು ಸರಿಯಾಗಿದೆ.
ವಿತರಣೆಯ ಆಯ್ಕೆಯೊಂದಿಗೆ ಚಿನ್ನವನ್ನು ಸಂಗ್ರಹಿಸಲು ಬಯಸುವ ವ್ಯಕ್ತಿಗಳಿಗೆ, ಡಿಜಿಟಲ್ ಗೋಲ್ಡ್ ಒಂದು ಸುರಕ್ಷಿತ, ಅನುಕೂಲಕರ ಮತ್ತು ತೊಂದರೆ-ಮುಕ್ತ ಮಾರ್ಗವಾಗಿದೆ.
ನೀವು ಇಂದು ಡಿಜಿಟಲ್ ಗೋಲ್ಡ್ ಅನ್ನು ಏಕೆ ಖರೀದಿಸಬೇಕು ಎಂಬುದಕ್ಕೆ 10 ಕಾರಣಗಳು ಇಲ್ಲಿವೆ:
ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡುವ ಒಂದು ಉತ್ತಮ ವಿಷಯವೆಂದರೆ, ನೀವು 1 ರೂಪಾಯಿಯಿಂದ ಚಿನ್ನದ ಮೇಲೆ ಉಳಿತಾಯ ಮತ್ತು ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ಯಾವುದೇ ಇತರ ರೀತಿಯ ಚಿನ್ನವು ನೀಡದ ಫ್ಲೆಕ್ಸಿಬಿಲಿಟಿಯನ್ನು, ಡಿಜಿಟಲ್ ಗೋಲ್ಡ್ ಒದಗಿಸುತ್ತದೆ. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸಣ್ಣ ಮೊತ್ತದಲ್ಲಿ ಖರೀದಿಸಬಹುದು.
ಫಿಸಿಕಲ್ ಗೋಲ್ಡ್ನ ಸಂದರ್ಭದಲ್ಲಿ, ನಿಮ್ಮ ಚಿನ್ನವನ್ನು ಶೇಖರಿಸಿಡಲು ನೀವು ವಾಲ್ಟ್ ಅನ್ನು ಪಡೆಯಬೇಕು ಮತ್ತು ಆ ಚಿನ್ನಕೆ ಯಾವಾಗಲೂ ಕಳ್ಳತನವಾಗುವ ಸಂಭವವಿರುತ್ತದೆ.
ಡಿಜಿಟಲ್ ಗೋಲ್ಡ್ ಆ ಲೋಪದೋಷವನ್ನು ತುಂಬಿತು. ಡಿಜಿಟಲ್ ಗೋಲ್ಡ್ನಲ್ಲಿ ಯಾವುದೇ ಸಂಗ್ರಹಣೆಯ ಅಥವಾ ಭದ್ರತೆಯ ಸಮಸ್ಯೆಗಳಿಲ್ಲ.
ಮಾರಾಟಗಾರರಿಂದ ನಿಮ್ಮ ಖಾತೆಯಲ್ಲಿರುವ ಪ್ರತಿ ಗ್ರಾಂ ಚಿನ್ನವು, ನಿಮ್ಮ ಹೆಸರಿನ ಸುರಕ್ಷಿತ ವಾಲ್ಟ್ನಲ್ಲಿರುವ ನೈಜ ಚಿನ್ನವನ್ನು ಖಾತರಿಪಡಿಸುತ್ತದೆ. ಡಿಜಿಟಲ್ ಗೋಲ್ಡ್ಗೆ ಯಾವುದೇ ಸಮಯದಲ್ಲಿ ಅಪಾಯವಿಲ್ಲ.
ಒಂದು ಕಾಲದಲ್ಲಿ ಚಿನ್ನವನ್ನು ಕರೆನ್ಸಿಯಾಗಿ ಬಳಸಲಾಗುತ್ತಿತ್ತು, ಏಕೆಂದರೆ ಮಾರುಕಟ್ಟೆಯಲ್ಲಿ ಈಗಲೂ ಹೆಚ್ಚು ಲಿಕ್ವಿಡ್ ಆಗಿರುವ ಆಸ್ತಿಯೆಂದರೆ ಅದು ಚಿನ್ನ.
ನೀವು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಿಂದ, ಕೆಲವೇ ಸುಲಭ ಹಂತಗಳಲ್ಲಿ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.
ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಅಥವಾ ನೋಂದಾಯಿತ ವ್ಯಾಲೆಟ್ಗೆ ಹಾಕಲಾಗುತ್ತದೆ.
ಭವಿಷ್ಯದಲ್ಲಿ ಚಿನ್ನದ ಸಂಪೂರ್ಣ ಮರುಮಾರಾಟ ಮೌಲ್ಯವನ್ನು ಪಡೆಯಲು, ನೀವು ಡೀಲರ್ನನ್ನು ಭೇಟಿ ಮಾಡುವ ಅಗತ್ಯವಿಲ್ಲ ಅಥವಾ ಹಲವು ವರ್ಷಗಳವರೆಗೆ ಸಂರಕ್ಷಿತ 'ಗೋಲ್ಡ್ ಪರ್ಚೇಸ್ ಅಕೌಂಟ್' ಅನ್ನು ಉಳಿಸಿಕೊಳ್ಳುವ ಅಗತ್ಯವಿಲ್ಲ.
ಡಿಜಿಟಲ್ ಗೋಲ್ಡ್ ನಿಮಗೆ ಶುದ್ಧ ಚಿನ್ನದಲ್ಲಿ ವ್ಯಾಪಾರ ಮಾಡಲು ಅನುಮತಿಸುತ್ತದೆ, ಅಂದರೆ 24 ಕ್ಯಾರೆಟ್ ಚಿನ್ನ.
ಈ ಪ್ರಕ್ರಿಯೆಯಲ್ಲಿ ಎಲ್ಲಿಯೂ, ಯಾವುದೇ ಗುಪ್ತ ಶುಲ್ಕಗಳಿಲ್ಲ ಮತ್ತು ನೀವು ಖರ್ಚು ಮಾಡುವ ಸಂಪೂರ್ಣ ಮೊತ್ತವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ.
ನೀವು ವಹಿವಾಟು ನಡೆಸುವಾಗ ಕೇವಲ 3% GST ಅನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಭಾರತದ ಮೂರು ಚಿನ್ನದ ಬ್ಯಾಂಕ್ಗಳಾದ ಅಗ್ಮಾಂಟ್, ಎಮ್ಎಮ್ಟಿಸಿ, ಪಿಎಎಮ್ಪಿ ಮತ್ತು ಸೇಫ್ ಗೋಲ್ಡ್ ಇವುಗಳಲ್ಲಿ ಯಾವುದಾದರೊಂದು ಬ್ಯಾಂಕ್ನಲ್ಲಿರುವ ನಿಮ್ಮ ಹೆಸರಿನ ಲಾಕರ್ನಲ್ಲಿ, ನೀವು ಖರೀದಿಸುವ ಪ್ರತಿ ಗ್ರಾಂ ಚಿನ್ನಕ್ಕಾಗಿ ನಿಜವಾದ 24k ಚಿನ್ನವನ್ನು ಇರಿಸಲಾಗುತ್ತದೆ:
ನಿಮ್ಮ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎನ್ನುವುದಕ್ಕೆ ಇದು ಭರವಸೆ ನೀಡುತ್ತದೆ. ಫಿಸಿಕಲ್ ಗೋಲ್ಡ್ನಂತೆ, ಡಿಜಿಟಲ್ ಗೋಲ್ಡ್ನ ವಿಷಯದಲ್ಲಿ ಕಳ್ಳತನವಾಗುವ ಅಥವಾ ಹಳೆಯದಾಗುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.
ಸೇಫ್ಗೋಲ್ಡ್, ಜಾರ್ನ ಪಾಲುದಾರ ಗೋಲ್ಡ್ ಬ್ಯಾಂಕ್ ಇವುಗಳು 'ಗುಡ್ ಡೆಲಿವರಿ' ಮಾನದಂಡಗಳನ್ನು ಪೂರೈಸುವ ಗೋಲ್ಡ್ ಬಾರ್ಗಳನ್ನು ಮಾತ್ರ ಖರೀದಿಸುತ್ತವೆ. ಮತ್ತು ಎಲ್ಲಾ ನಾಣ್ಯಗಳನ್ನು ಸರ್ಕಾರಿ-ಅನುಮೋದಿತ ಲ್ಯಾಬೊರೇಟರಿಯಿಂದ ದೃಢೀಕರಿಸಲಾಗುತ್ತದೆ.
99.99% 24K ಚಿನ್ನದ ಶ್ರೇಷ್ಠ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ನಾಣ್ಯ ಮತ್ತು ಬಾರ್ ಅನ್ನು ಪ್ರೊಫೆಷನಲ್ ಆಗಿ ಪರಿಶೀಲಿಸಲಾಗುತ್ತದೆ.
ನಿಮ್ಮ ಚಿನ್ನವನ್ನು ಮನೆಗೆ ತಲುಪಿಸಲು ನೀವು ಬಯಸಿದರೆ, ನೀವದನ್ನು ಯಾವುದೇ ಸಮಯದಲ್ಲಿ ಟ್ಯಾಂಪರ್-ಪ್ರೂಫ್, ಇನ್ಶೂರೆನ್ಸ್ ಮಾಡಿದ ಪ್ಯಾಕೇಜ್ನಲ್ಲಿ ಅವರ ಮನೆಗೆ ತಲುಪಿಸಬಹುದು. ಅದಕ್ಕಾಗಿ ಯಾವುದೇ ಮೇಕಿಂಗ್ ಅಥವಾ ಡೆಲಿವರಿ ಶುಲ್ಕಗಳಿಲ್ಲ.
ನಾವು ಮೊದಲೇ ಹೇಳಿದಂತೆ, ಚಿನ್ನವು ಲಿಕ್ವಿಡ್ ಸರಕಾಗಿದೆ. ಕೆಲವು ಅಸೋಸಿಯೇಟ್ ಆಭರಣಕಾರರೊಂದಿಗೆ ಡಿಜಿಟಲ್ ಗೋಲ್ಡ್ ಅನ್ನು, ಆಭರಣಕ್ಕಾಗಿ ಸುಲಭವಾಗಿ ಎಕ್ಸಚೇಂಜ್ ಮಾಡಿಕೊಳ್ಳಬಹುದು.
ಜಾರ್ನ ಪಾರ್ಟ್ನರ್ ಗೋಲ್ಡ್ ಬ್ಯಾಂಕ್ ಆಗಿರುವ ಸೇಫ್ಗೋಲ್ಡ್ ವಿಷಯದಲ್ಲಿ, ಕ್ಯಾರಟ್ಲೇನ್, ತನಿಷ್ಕ್ ಮತ್ತು ಕಲ್ಯಾಣ್ ಅವರ ಕ್ಯಾಂಡೆರೆ ಇವುಗಳು ಜ್ಯುವೆಲರಿ ಪಾರ್ಟ್ನರ್ಗಳಾಗಿದ್ದಾರೆ.
ಇದು ಸರಿಯಾಗಿದೆ ಅಲ್ಲವೇ? ನೀವೀಗ ನಿಮ್ಮ ಪ್ರೀತಿಪಾತ್ರರಿಗೆ, ನಿಮ್ಮ ಜೇಬನ್ನು ಬರಿದಾಗಿಸಿಕೊಳ್ಳದೆಯೇ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಉಡುಗೊರೆಯಾಗಿ ನೀಡಬಹುದು - ಅದು ಯಾವುದೇ ಸಮಯದಲ್ಲಾದರೂ ಮತ್ತು ಎಲ್ಲಿಂದಲಾದರೂ ಸರಿ.
ಅದು ಕೂಡ ಜಾರ್ ಆ್ಯಪ್ನಲ್ಲಿರುವ ಕೆಲವೇ ಸರಳ ಹಂತಗಳಲ್ಲಿ. ಡಿಜಿಟಲ್ ಗೋಲ್ಡ್ನ ಈ ಪ್ರಯೋಜನದೊಂದಿಗೆ ಪ್ರತಿ ಸಂದರ್ಭವನ್ನು ವಿಶೇಷವಾಗಿಸಿ.
ನೀವು ಜಾರ್, ಪೇಟಿಎಮ್, ಫೋನ್ ಪೇ, ಬಜಾಜ್ ಫಿನ್ಸರ್ವ್, ಮೊಬಿಕ್ವಿಕ್ನಂತಹ ವಿವಿಧ ಮೊಬೈಲ್ ವ್ಯಾಲೆಟ್ಗಳು, ಯುಪಿಐ ಅಪ್ಲಿಕೇಶನ್ಗಳು ಮತ್ತು ಬ್ಯಾಂಕ್ಗಳ ಮೂಲಕ ಡಿಜಿಟಲ್ ಗೋಲ್ಡ್ ಅನ್ನು ಖರೀದಿಸಬಹುದು.
ಡಿಜಿಟಲ್ ಗೋಲ್ಡ್ ಅನ್ನು ಖರೀದಿಸುವುದು ತುಂಬಾ ಅನುಕೂಲಕರ ಮತ್ತು ಸುಲಭವಾಗಿದೆ. ಡಿಜಿಟಲ್ ಗೋಲ್ಡ್ ಈಗ 100 ಮಿಲಿಯನ್ಗಿಂತಲೂ ಹೆಚ್ಚು ಜನರಿಂದ ಖರೀದಿಸಲ್ಪಟ್ಟಿದೆ. ಹಾಗಾದರೆ, ನೀವೀಗ ಕಾಯುತ್ತಿರುವುದೇಕೆ?
ಫಿಕ್ಸೆಡ್-ಇಂಟರೆಸ್ಟ್ ಇನ್ವೆಸ್ಟ್ಮೆಂಟ್ಗಳು, ಅದರಲ್ಲೂ ನಿರ್ದಿಷ್ಟವಾಗಿ ಫಿಕ್ಸೆಡ್ ಡೆಪಾಸಿಟ್ಗಳು, ಆದಾಯವನ್ನು ನೀಡಲು ಕಠಿಣ ಸಮಯವನ್ನು ಹೊಂದಿರುತ್ತವೆ.
ಮತ್ತೊಂದೆಡೆ, ಷೇರುಗಳು ಅಥವಾ ಈಕ್ವಿಟಿಗಳು ತುಂಬಾ ತೀವ್ರವಾಗಿ ಗಗನಕ್ಕೇರಿವೆ. ಅವುಗಳು ಅಪಾಯಕಾರಿ ಹೂಡಿಕೆಗಳಾಗಿ ಉಳಿಯುತ್ತವೆ.
ರಿಯಲ್ ಎಸ್ಟೇಟ್ ದೀರ್ಘಾವಧಿಯ ಹೂಡಿಕೆಯಾಗಿದ್ದು ಆದರೆ ಅದು ಲಿಕ್ವಿಡ್ ಅಲ್ಲ. ಹಾಗಾಗಿ ಅದರಲ್ಲಿ ದೊಡ್ಡ ಪ್ರಮಾಣದ ಅನಿಶ್ಚಿತತೆ ಇದೆ.
ಆದರೆ ಚಿನ್ನವನ್ನು ಸುರಕ್ಷಿತ ಆಸ್ತಿ ಎಂದು ಪರಿಗಣಿಸಲಾಗಿದೆ. ಹಿಂದಿನ ಹತ್ತು ವರ್ಷಗಳಲ್ಲಿ, ಚಿನ್ನದ ಬೆಲೆಯು ಸರಿಸುಮಾರು 300% ಹೆಚ್ಚಾಗಿದೆ.
ಚಿನ್ನದ ಕೊರತೆಯಿಂದಾಗಿ ಇದು ಕಾಲಾನಂತರದಲ್ಲಿ, ಅನಿರೀಕ್ಷಿತ ಮಾರುಕಟ್ಟೆಗಳ ವಿರುದ್ಧ ಬಲವಾದ ಬೇಲಿಯಾಗಿದೆ ಎಂದು ತೋರಿಸಿದೆ.
ಹೂಡಿಕೆ ಮತ್ತು ವ್ಯಾಪಾರದ ವಿಷಯದಲ್ಲಿ, ಚಿನ್ನವು ಯಾವುದೇ ರೂಪದಲ್ಲಿ ದೀರ್ಘ ದಾಖಲೆಯನ್ನು ಹೊಂದಿದೆ. ಇದು ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಪರ್ಯಾಯವೆಂದು ಭಾವಿಸಲಾಗಿದೆ.
ಚಿನ್ನವನ್ನು ಹೇಗೆ ಮ್ಯಾನೇಜ್ ಮಾಡುವುದು ಎನ್ನುವುದರಲ್ಲಿ ಬದಲಾವಣೆಗಳ ಹೊರತಾಗಿಯೂ, ಭವಿಷ್ಯದಲ್ಲಿ ಅದರಲ್ಲೂ ವಿಶೇಷವಾಗಿ ದೀರ್ಘಾವಧಿಯ ಹೂಡಿಕೆದಾರರಿಗೆ, ಚಿನ್ನದ ಹೂಡಿಕೆಯು ಸ್ಟೈಲ್ನಿಂದ ಹೊರಗುಳಿಯುವುದಿಲ್ಲ.
ಆದ್ದರಿಂದ, ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಯಾವಾಗಲೂ ಉತ್ತಮ ಸಮಯ.
ಶತಮಾನಗಳ ಪೋರ್ಟ್ಫೋಲಿಯೊಗಳಲ್ಲಿ ಚಿನ್ನದ ಹೂಡಿಕೆಗಳು ಸ್ಥಾನ ಪಡೆದಿವೆ. ಹೂಡಿಕೆ ಮಾಡಿದ ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ವಿಧಾನವು ದಿನೇ ದಿನೇ ಬೆಳೆಯುತ್ತಿರುವಾಗ, ಮುಂದಿನ ದಿನಗಳಲ್ಲಿ ಚಿನ್ನದ ಹೂಡಿಕೆಯು ಸ್ಟೈಲ್ನಿಂದ ಹೊರಗುಳಿಯುವ ಸಾಧ್ಯತೆಯಿಲ್ಲ. ವಿಶೇಷವಾಗಿ ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ಬಯಸುವ ವ್ಯಕ್ತಿಗಳಿಗೆ ಚಿನ್ನದ ಮೇಲಿನ ಹೂಡಿಕೆಯು ಅತ್ಯಂತ ಸೂಕ್ತವಾಗಿದೆ.
ತಮ್ಮ ಪರಿಚಿತ ಡಿಜಿಟಲ್ ಕ್ಷೇತ್ರದ ಸುರಕ್ಷತೆಗಾಗಿ, ವಿಶ್ವಾಸಾರ್ಹ ಸಾಧನವನ್ನು ಆಯ್ಕೆ ಮಾಡುವ ಡಿಜಿಟಲ್ ನೇಟಿವ್'ಗಳಿಗೆ ದೀರ್ಘಾವಧಿ ಸಂಪತ್ತನ್ನು ಉತ್ಪಾದಿಸಲು, ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಬುದ್ಧಿವಂತ ಮತ್ತು ಸುರಕ್ಷಿತ ನಿರ್ಧಾರವಾಗಿದೆ.
ಈ ಅದ್ಭುತ ಹೂಡಿಕೆಯನ್ನು ನೀವು ಏಕೆ ಕಳೆದುಕೊಳ್ಳುತ್ತೀರಿ? ಈಗಲೇ ಜಾರ್ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ಈಗಿನಿಂದಲೇ 1 ರೂಪಾಯಿಯಿಂದ ಚಿನ್ನದಲ್ಲಿ ಹೂಡಿಕೆಯನ್ನು ಪ್ರಾರಂಭಿಸಿ.