Buy Gold
Sell Gold
Daily Savings
Round-Off
Digital Gold
Instant Loan
Nek Jewellery
ಆರ್ಥಿಕ ಒದ್ದಾಟದಲ್ಲಿ ಸಿಲುಕಿದ್ದೀರಾ? ಹೊರಬರುವ ದಾರಿ ತಿಳಿಯುತ್ತಿಲ್ಲವೇ? ನಿಮ್ಮನ್ನು ನೀವು ಇದರಿಂದ ಹೊರಗೆಳೆದುಕೊಳ್ಳಲು ಈ ಪರಿಹಾರಗಳನ್ನು ಓದಿರಿ.
ಸಾಲ ಬಲೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಈ ಸಣ್ಣ ಕಥೆಯಿಂದ ಆರಂಭಿಸೋಣ. ನಿಮ್ಮ ಆದಾಯ ರೂ.10,000 ಇದ್ದು ಇದು ನಿಮ್ಮ ಬೇಡಿಕೆಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದುಕೊಳ್ಳೋಣ.
ನಿಮಗೊಂದು ಆಕರ್ಷಕ ಫೋನ್ ಅಥವಾ ಐಫೋನ್ ಖರೀದಿಸಬೇಕಾಗಿದೆ ಎಂದು ಭಾವಿಸಿ. ಇಂತಹ ಸಂದರ್ಭಗಳಲ್ಲಿ, ನೀವು ಸಾಲದ ಮೊರೆ ಹೋಗುತ್ತೀರಿ.
ನೀವು ಬ್ಯಾಂಕಿನಿಂದ ರೂ 5,000 ದ ಮಾಸಿಕ ಇಎಂಐ ಅನ್ನು ಪಡೆಯುತ್ತೀರಿ. ನಂತರ ಬರುವ ತಿಂಗಳಿನಲ್ಲಿ ನಿಮಗೆ ಮತ್ತೆ ರೂ.10,000 ಸಿಗುತ್ತದೆ, ಆದರೆ ಇದರ ಅರ್ಧ ಭಾಗವು ನಿಮ್ಮ ಸಾಲ ಪೂರ್ತಿಗಾಗಿ ಬಳಕೆಯಾಗುತ್ತದೆ ಹಾಗೂ ಉಳಿದ ಭಾಗ ನಿಮಗೆ ಸಾಕಾಗದೇ ಇದ್ದ ಕಾರಣ, ನೀವು ಮತ್ತೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತೀರಿ.
ಹೀಗೇ, ಈ ಚಕ್ರವು ಆರಂಭವಾಗುತ್ತದೆ. ಋಣವನ್ನು ಸರಿಯಾದ ಸಮಯದಲ್ಲಿ ತೀರಿಸದೇ ಇದ್ದರೆ ಅದು ನಿಮ್ಮನ್ನು ಸಾಲಕ್ಕೆ ತಳ್ಳುತ್ತದೆ.
ನೀವು ಹಿಂದಿನ ಸಾಲಗಳನ್ನು ತೀರಿಸಲು ವಿಫಲರಾಗಿದ್ದು ಹೊಸ ಸಾಲಗಳನ್ನು ಪಡೆಯುತ್ತಾ ಹೋದರೆ, ನೀವು ಈ ಬಲೆಯಲ್ಲಿ ಇನ್ನಷ್ಟು ಸುತ್ತುತ್ತಾ ಹೋಗುತ್ತೀರಿ - ಇದನ್ನು ಸಾಲ ಬಲೆ ಎಂದು ಕರೆಯಲಾಗುತ್ತದೆ.
ಉಳಿತಾಯ ಹಾಗೂ ಹೂಡಿಕೆ ತಂತ್ರಗಳನ್ನು ಹೊಂದಿರುವ ಜೊತೆಗೆ ಆರ್ಥಿಕವಾಗಿ ಸಮರ್ಥರಾಗಲು ಬೇಕಾಗಿರುವ ಇನ್ನೊಂದು ಪ್ರಮುಖ ಮಾನದಂಡವೆಂದರೆ ಸಾಲದ ತಂತ್ರ.
ಸಾಲದ ತಂತ್ರವು ನಿಮ್ಮನ್ನು ಸಾಲಗಳಿಂದ ಹೊರಬರಲು, ನಿಮ್ಮ ಹಣಕಾಸಿನ ನಿರ್ವಹಣೆ ಮಾಡಲು ಹಾಗೂ ಒಂದು ಆರ್ಥಿಕವಾಗಿ ಆರೋಗ್ಯಕರವಾದ ಜೀವನ ನಡೆಸಲು ಸಹಾಯ ಮಾಡುತ್ತದೆ.
ನೀವು ಸಾಲದ ಪೆಡಂಭೂತದ ಬೇಡಿಯಲ್ಲಿ ಸಿಲುಕುವ ಬಗ್ಗೆ ಚಿಂತಿಸಬೇಕಾಗುವುದಿಲ್ಲ. ಆದರೆ ಮೊದಲಿಗೆ, ಸಾಲ ಬಲೆ ಏನು ಎಂಬುವುದನ್ನು ನಾವು ಅರ್ಥಮಾಡಿಕೊಳ್ಳೋಣ.
ನೀವು ನಿಮ್ಮ ಹಿಂದಿನ ಸಾಲಗಳನ್ನು ತೀರಿಸುವುದಕ್ಕಾಗಿ ಅತಿಯಾದ ಸಾಲ ಮಾಡಿದರೆ ಸಾಲ ಬಲೆ ಉಂಟಾಗುತ್ತದೆ.
ಒಮ್ಮೆ ಈ ಸಾಲವು ನಿಮ್ಮ ನಿಯಂತ್ರಣವನ್ನು ಮೀರಿ ಸುರುಳಿಯಾಗುತ್ತಾ ಹೋಗಿ ನಿಮ್ಮ ಪಾವತಿಯ ಸಾಮರ್ಥ್ಯದಿಂದ ಹೊರಬಿದ್ದರೆ, ಈ ಸಂದರ್ಭದಲ್ಲಿ ನೀವು ಸಾಲಬಲೆಗೆ ಬೀಳುತ್ತೀರಿ.
ನಾವು ಅದರ ಅಳತೆ ಮಾಡುವುದು ಹೇಗೆ? ಸಾಲಬಲೆಯನ್ನು ಸೂಚಿಸುವ ಕೆಲವು ಮಾರ್ಗಗಳಿವೆ.
ಇಂತಹ ಸಂದರ್ಭದಲ್ಲಿ, ನಿಮ್ಮ ಆಸ್ತಿಯನ್ನು ಬೆಳೆಸಲು ನೀವು ನಿಮ್ಮ ಆದಾಯವನ್ನು ಹೆಚ್ಚಿಸಲು ಪರ್ಯಾಯವನ್ನು ಹುಡುಕಬೇಕಾಗುತ್ತದೆ ಅಥವಾ ನಿಮ್ಮ ಸಾಲದ ಮೊತ್ತವನ್ನು ಕಡಿಮೆಮಾಡಬೇಕಾಗುತ್ತದೆ ಇಲ್ಲವಾದಲ್ಲಿ ನೀವು ಈ ಸಾಲ ಬಲೆಯ ಸುಳಿಗೆ ಎಳೆಯಲ್ಪಡುತ್ತೀರಿ.
ನೀವು ಸಾಲ ನೀಡುವವರಿಂದ ಸಾಲ ಪಡೆಯುವ ಹಂತದಲ್ಲಿ, ಎರಡು ಅಂಶಗಳು ಗಣನೆಗೆ ಬರುತ್ತವೆ - ಮೊದಲಿನದು ಮೂಲ ಸಾಲದ ಮೊತ್ತ(ನಿಮಗೆ ಸಿಗುವಂತಹ ಮೊತ್ತ), ಎರಡನೆಯದು ಬಡ್ಡಿ(ಸಾಲದ ಮೂಲ ಮೊತ್ತದ ಮೇಲೆ ಬ್ಯಾಂಕ್ ವಿಧಿಸುವ ಮೊತ್ತ).
ನಿಮ್ಮ ಮೂಲಮೊತ್ತವು ಕಡಿಮೆಯಾಗಲು ಆರಂಭಿಸಿದಾಗ ನಿಮ್ಮ ಸಾಲ ತೀರಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಆದರೂ, ಇಲ್ಲೊಂದು ಅಡಚಣೆಯಿದೆ.
ನೀವು ಸಾಲವನ್ನು ನಿಯಮಿತವಾಗಿ ಮರುಪಾವತಿಸುವ ಪ್ರತೀಸಲವೂ, ನೀವು ಮೂಲ ಮೊತ್ತ ಹಾಗೂ ಬಡ್ಡಿ ಎರಡರ ಕಂತನ್ನೂ ಕಟ್ಟುತ್ತಿರುತ್ತೀರಿ.
ಇದರ ಆಧಾರವು ಹೆಚ್ಚಿನ ಸಾಲಗಳು ಹೊಂದಿರುವ ಕ್ರಮೇಣ ತೀರಿಕೆಯ ರಚನೆಯಾಗಿದೆ.
ಇದು ಸೂಚಿಸುವುದೇನೆಂದರೆ, ನಿಮ್ಮ ಸಾಲವು ಸ್ಥಿರ ಕಂತುಗಳ ಒಂದು ಸರಣಿಯಲ್ಲಿ ಪಾವತಿ ಆಗತಕ್ಕದ್ದು, ಹಾಗೂ ನೀವು ನಿಮ್ಮ ಸಾಲದ ಪ್ರತಿ ಪಾವತಿಸುವ ಪ್ರತೀ ಕಂತು ಮೂಲಮೊತ್ತ ಹಾಗೂ ಬಡ್ಡಿ ಎರಡಕ್ಕೂ ಅನ್ವಯಿಸುತ್ತದೆ.
ನೀವು ಕಂತನ್ನು ಪಾವತಿ ಮಾಡಲು ಆಗದೆ ಇರುವ ಸಂದರ್ಭದಲ್ಲಿ, ನೀವು ಬಹುತೇಕವಾಗಿ ಬಾಧ್ಯತೆಯ ಬಲೆ ಸಿಲುಕುತ್ತೀರಿ. ಹೇಗೆ?
ಮೂಲ ಮೊತ್ತವು ಕಡಿಮೆಯಾಗುವುದಿಲ್ಲ, ಬಡ್ಡಿಯು ಬೆಳೆಯುತ್ತಾ ಹೋಗುತ್ತದೆ, ಹಾಗೂ ಇದರಿಂದ ನಿಮ್ಮ ಸಾಲವನ್ನು ನಿಭಾಯಿಸಲು ನಿಮಗೆ ಕಷ್ಟವಾಗುತ್ತದೆ.
ನಿಮ್ಮನ್ನು ಸುಳಿಗೆ ಸಿಲುಕಿಸುವ ಕಾರಣಗಳು ಇಲ್ಲಿವೆ. ಇವುಗಳಲ್ಲಿ ಯವುದಾದರೂ ಅಂಶ ನಿಮಗೆ ಪರಿಚಿತ ಎನಿಸಿದರೆ, ನಿಮ್ಮ ಖರ್ಚುಗಳನ್ನು ನಿಯಂತ್ರಿಸುವ ಸಮಯ ಬಂದಾಗಿದೆ.
ಇದನ್ನು ಸುಧಾರಿಸಲು ನೀವೇನು ಮಾಡಬಹುದು?
3.ಸಾಲ ಬಲವರ್ಧನೆ ಸಾಲದ ಆಯ್ಕೆ ಮಾಡಿ(You can choose for a debt consolidation loan) : ನೀವು ತಿಂಗಳಿನ ವಿವಿಧ ಸಮಯಗಳಲ್ಲಿ ವಿವಿಧ ಸಾಲಗಳನ್ನು ತೀರಿಸುತ್ತಾ ಹೋದರೆ, ನೀವು ಒಂದು ಕಡಿಮೆ ಬಡ್ಡಿದರದ ಸಾಲ ಅಥವಾ ಸಾಲ ಬಲವರ್ಧನೆ ಸಾಲವನ್ನು ಪಡೆದು ನಿಮ್ಮ ಸಾಲವನ್ನು ಒಟ್ಟುಗೂಡಿಸಲು ಪ್ರಯತ್ನಿಸಬಹುದು. ಒಮ್ಮೆ ನೀವು ಇದನ್ನು ಪಡೆದ ನಂತರ ನೀವು ಪ್ರತೀ ಕೇವಲ ಒಂದು ಸಾಲವನ್ನು ಪಾವತಿಸುವ ಬಗ್ಗೆ ಯೋಚಿಸಬಹುದು.
ಇದು ನಿಮಗೆ ಸಹಾಯ ಮಾಡುತ್ತದೆ :
4. ನಿಮ್ಮ ಪಾವತಿಗಳನ್ನು ಸ್ವಯಂಚಾಲಿತವಾಗಿಸಲು(Automate the payments) : ಒಬ್ಬ ಸಾಲಗಾರನಾಗಿ, ಇಎಂಐ ಮೂಲಕ ನಿಮ್ಮ ಸಾಲವನ್ನು ಸಮಯದಲ್ಲಿ ಪಾವತಿಸುವುದು ನಿಮ್ಮ ಕರ್ತವ್ಯವಾಗುತ್ತದೆ, ಇದು ನಿಮ್ಮ ಸಾಲಕೊಡುವವರ ಪ್ರತಿ ನಿಮಗಿರುವ ಬಾಧ್ಯತೆಯಾಗಿರುತ್ತದೆ. ನಿಮ್ಮ ಮರುಪಾವತಿಯಲ್ಲಿ ನೀವು ಸ್ಥಿರವಾಗಿರುವಿರಿ ಎಂದು ಖಚಿತಪಡಿಸಲು ನೀವು ನಿಮ್ಮ ಪಾವತಿಗಳನ್ನು ಸ್ವಯಂಚಾಲಿತವಾಗಿಸಬಹುದು. ಇದಕ್ಕಾಗಿ ಬ್ಯಾಂಕಿನಿಂದ ECS ಆದೇಶಗಳನ್ನು ಸೆಟ್ ಅಪ್ ಮಾಡಿಸುವುದರಿಂದ ಹಲವು ಪ್ರಾಯೋಜನಗಳಿವೆ:
5. ಹೆಚ್ಚು ಸಾಲ ಪಡೆಯುವುದನ್ನು ತಪ್ಪಿಸಿ(Avoid taking on more debt) : ನೀವು ನಿಮ್ಮ ಸಾಮರ್ಥ್ಯದ ತನಕ ಸಾಲವನ್ನು ಈಗಾಗಲೇ ಪಡೆದಿದ್ದರೆ ಇನ್ನೂ ಪಡೆಯುವುದನ್ನು ನಿಲ್ಲಿಸಬೇಕು. 40% ಕ್ಕಿಂತ ಕಡಿಮೆ ಅನುಪಾತದ ಪಾಲನೆ ಮಾಡುವುದು ನಿಮ್ಮ ನಿಯಮವಾಗಿರಬೇಕು. ಇದನ್ನು ನೀವು ಪಾಲಿಸದಿದ್ದರೆ, ನೀವು ನಿಮ್ಮ ಆರ್ಥಿಕತೆ ಮೇಲೆ ಒತ್ತಡವನ್ನು ಹೇರುತ್ತೀರಿ. ನಿಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳಲು ಕಾರಣವಾಗಬಲ್ಲ ಆರ್ಥಿಕ ದುರಂತವನ್ನು ನೀವು ತಪ್ಪಿಸಬಹುದು.
6. ನಿಮ್ಮ ಆದಾಯವನ್ನು ಹೆಚ್ಚಿಸುವ ವಿಧಾನಗಳನ್ನು ಹುಡುಕಿ(Look for ways to increase your income) : ಸಾಲದಿಂದ ಹೊರಬರಲು ಇರುವ ಏಕೈಕ ಔಪಚಾರಿಕ ಉಪಾಯವೆಂದರೆ ಹೆಚ್ಚು ಆದಾಯವನ್ನು ಸಂಗ್ರಹಿಸುವುದು. ಹೆಚ್ಚು ಆದಾಯದಿಂದ ಆರ್ಥಿಕ ಭದ್ರತೆಯು ಹೆಚ್ಚಿ ನಿಮ್ಮ ಸಾಲವು ಶೀಘ್ರವಾಗಿ ಹಾಗೂ ಸರಳವಾಗಿ ತೀರುತ್ತದೆ. ನೀವು ಫ್ರೀಲ್ಯಾನ್ಸಿಂಗ್ ಕೆಲಸಗಳನ್ನು ಮಾಡಬಹುದು ಅಥವಾ ನಿಮ್ಮ ಕೌಶಲ್ಯ, ಜ್ಞಾನ ಹಾಗೂ ಅನುಭವಕ್ಕೆ ಸರಿಹೊಂದುವ ಎರಡನೇ ನೌಕರಿಯನ್ನೂ ಪಡೆಯಬಹುದು.
7.ಮೊದಲಿಗೆ ದುಬಾರಿ ಸಾಲಗಳನ್ನು ತೀರಿಸಿ(Pay off the expensive loans first) : ನೀವು ಸಾಲ ಬಲವರ್ಧನೆ ಮಾಡಿಸದಿದ್ದರೆ, ನಿಮ್ಮ ಸಾಲಗಳನ್ನು ಪ್ರತ್ಯೇಕವಾಗಿಯೂ ತೀರಿಸುವ ಗೊಂದಲಕ್ಕೆ ಕೈಹಾಕಬಹುದು (ಒಂದು ಸಮಯದಲ್ಲಿ ಒಂದೇ ಸಾಲವನ್ನು ನಿಭಾಯಿಸಲು ಮರೆಯಬೇಡಿ) ರೂಪಿಸಿ, ವಿಶ್ಲೇಷಿಸಿ ಅತ್ಯಂತ ಭಾರೀ ಮೊತ್ತದ ಸಾಲವನ್ನು ಮೊದಲು ಪಾವತಿಸಿ.
8. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅಗ್ಗಾಗ್ಗೆ ಪರಿಶೀಲಿಸುತ್ತಿರಿ(Check your credit score frequently) : ಒಬ್ಬ ಒಳ್ಳೆ ಸಾಲಗಾರನ ಗುರುತೇನು? ಕ್ರೆಡಿಟ್ ಸ್ಕೋರ್. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ, ಅಭಿನಂದನೆಗಳು! ನೀವು ಉನ್ನತ ಸಾಲ ನೀಡುವಂತವರು ಅರಸುತ್ತಿರುವ ಪ್ರೀಮಿಯಂ ಜನರಲ್ಲಿ ಒಬ್ಬರಾಗಿದ್ದೀರಿ. ನಿಮಗೆ ಉತ್ತಮ ಬಡ್ಡಿ ದರ, ಉತ್ತಮ ಸಾಲ ತಂಡ ಹಾಗೂ ಒಂದು ಆರೋಗ್ಯಕರ ಆರ್ಥಿಕ ಭವಿಷ್ಯ ದೊರೆಯುತ್ತದೆ. ನೀವು ಎಂದಿಗೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನವಿಟ್ಟಿರಬೇಕು. ನೀವು ಒಂದು ಸಾಲದ ಖಾತೆಯ ಮೇಲೆ ಪ್ರತೀ 3 ತಿಂಗಳುಗಳಿಗೊಮ್ಮೆ ಕ್ರೆಡಿಟ್ ವರದಿಯನ್ನು ಕೇಳಿ ಪಡೆಯಬಹುದು. ಅದರಲ್ಲಿ ದಾಖಲೆಗಳು ಸರಿಯಾಗಿ ತುಂಬಿಸಲಾಗಿದೆಯೇ ಎಂದು ಪರಿಶೀಲಿಸಬಹುದು.
9. ವೃತ್ತಿಪರ ನೆರವನ್ನು ಪಡೆಯಿರಿ(Get help professionally) : ಕೆಲವೊಮ್ಮೆ ನಿಮ್ಮಷ್ಟಕ್ಕೇ ಒಂದು ಸಾಲ ಬಲೆಯಿಂದ ಹೊರಬರುವುದು ಕಷ್ಟಕರವೆನಿಸಬಹುದು ಎಂದು ನಮಗೆ ಅರ್ಥವಾಗುತ್ತದೆ. ಆದರೆ ಚಿಂತಿಸಬೇಡಿ ನಿಮ್ಮ ಜೀವನವನ್ನು ಸರಳವಾಗಿಸಲು ವೃತ್ತಿಪರರು ಇದ್ದಾರೆ. ನಿಮಗೆ ಯಾವತ್ತಾದರೂ ಆರ್ಥಿಕವಾಗಿ ಕಳೆದುಹೋದ ಹಾಗೆ ಅನಿಸಿದರೆ, ಆರ್ಥಿಕ ತಜ್ಞರನ್ನು ಸಮಾಲೋಚಿಸುವುದು ಉತ್ತಮ ನಿರ್ಧಾರವಾಗಿರುತ್ತದೆ. ನಿಮಗೆ ಸಮಾಲೋಚನೆ ಒದಗಿಸಿ, ನಿಮ್ಮ ಬಜೆಟ್ ಅನ್ನು ನಿಮಗೆ ಅರ್ಥಮಾಡಿಸಿ ನಿಮ್ಮನ್ನು ಅತೀಯಾಗಿ ಖರ್ಚು ಮಾಡದಂತೆ ತಡೆಯುವ ಕೆಲ ಆರ್ಥಿಕ ತಜ್ಞರು ಇದ್ದಾರೆ. ಕೆಲ ವೃತ್ತಿಪರರು ನಿಮಗೆ ಸಾಲ ನೀಡಿದವರ ಜೊತೆ ನಿಮ್ಮ ಪರವಾಗಿ ಒಪ್ಪಂದ ಮಾಡಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ನಿಯಮಗಳನ್ನು ಬದಲಾಯಿಸುವಂತಹ ಸಹಾಯವನ್ನೂ ಮಾಡುತ್ತಾರೆ.
ನಿಮ್ಮ ಆರ್ಥಿಕ ಆರೋಗ್ಯವನ್ನು ಎ+ ಆಗಿರಿಸಲು ನಾವು ನಿಮಗಾಗಿ ಉತ್ತಮ ಮಾರ್ಗವನ್ನು ಒದಗಿಸುತ್ತೇವೆ. ನೀವು ಹಲವಾರು ಅಧಿಕ ಬಡ್ಡಿ ಇರುವ ಸಾಲಗಳನ್ನು ಹಾಗೂ ಭಾರೀ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಹೊತ್ತು ತಿರುಗುತ್ತಿದ್ದರೆ, ನೀವು ನಿಧಾನವಾಗಿ ಒಂದು ಆರ್ಥಿಕ ಗೊಂದಲವನ್ನು ಸೃಷ್ಟಿಸುತ್ತಿದ್ದೀರಿ.
ನೀವು ಈ ಗಾದೆಯನ್ನು ಕೇಳಿದ್ದೀರಾ, ‘ಹಲವು ಅಡಿಗೆಯವರು ಸೇರಿ ಸಾರನ್ನು ಕೆಡಿಸಿದರು’ ಎಂದು? ಅಂತೆಯೇ, ಸಾಲಮುಕ್ತವಾಗಲು ಒಂದು ಜಾಣ್ಮೆಯ ಉಪಾಯವೆಂದರೆ ಕಡಿಮೆ ಬಡ್ಡಿಯಿರುವ ವಯಕ್ತಿಕ ಸಾಲವನ್ನು ಪಡೆಯುವುದು.
ಈ ವಯಕ್ತಿಕ ಸಾಲವು ನಿಮ್ಮ ಎಲ್ಲಾ ಬಾಕಿಗಳನ್ನು ತೀರಿಸಿ ನಿಮ್ಮ ಬಹು ಪಾವತಿಗಳನ್ನು ನಿಮ್ಮ ಬಲವರ್ಧನೆಯ ವಯಕ್ತಿಕ ಸಾಲಕ್ಕಾಗಿ ಮಾಡುವ ಏಕೈಕ ಮಾಸಿಕ ಪಾವತಿಯಾಗಿ ಬದಲಾಯಿಸುತ್ತದೆ.