Playstore Icon
Download Jar App
Savings

ಆರ್ಥಿಕವಾಗಿ ಕಳೆದುಹೋಗುವ ಭಯ ನಿಮ್ಮ ಖರ್ಚುಗಳ ಮೇಲೆ ಪರಿಣಾಮ ಬೀರುತ್ತಿದೆಯೇ? ಇದನ್ನು ನಿಭಾಯಿಸಲು 5 ಪರಿಣಾಮಕಾರಿ ಸಲಹೆಗಳು.

December 28, 2022

ಕಳೆದುಹೋಗುವ ಭಯ ಅಥವಾ ಫಿಯರ್ ಆಫ್ ಮಿಸ್ಸಿಂಗ್ ಔಟ್; ಫೋಮೋ, ನಿಮ್ಮ ಬ್ಯಾಂಕ್ ಖಾತೆ ಹಾಗೂ ಉಳಿತಾಯಗಳ ಅಭ್ಯಾಸವನ್ನು ಪ್ರಶ್ನಿಸಬಹುದು. ಬಜೆಟ್ ಉಪಾಯಗಳ ಜೊತೆ ಇದರೊಂದಿಗೆ ಹೋರಾಡುವುದು ಹೇಗೆ ಎನ್ನುವುದರ ಬಗ್ಗೆ ಓದಿ.

ಇಲ್ಲಿಂದ ಆರಂಭಿಸೋಣ, ಕೆಲಸದ ಮುಂಜಾನೆಯಾಗಿದೆ, ಹಾಗೂ ನೀವು ಎಂದಿನಂತೆ ನಿಮ್ಮ ಸಾಮಾಜಿಕ ಜಾಲತಾಣದ ಮೇಲೆ ಕಣ್ಣು ಹಾಯಿಸುತ್ತಿರುವಾಗ ನಿಮ್ಮ ಸ್ನೇಹಿತನು ಆರಾಮವಾಗಿ ಥೈಲ್ಯಾಂಡಿನ ಕಡಲತೀರದಲ್ಲಿ ಪೋಸ್ ಮಾಡಿದ್ದನ್ನು ನೀವು ನೋಡುತ್ತೀರಿ. ಆಹ್!

ಜೀವನವನ್ನು ಆನಂದಿಸುತ್ತಿದ್ದಾನೆ…ಅದು ಹೇಗೆ ಅನಿಸುತ್ತದೆ? ನಿಮ್ಮೊಳಗೆ ಅಸೂಯೆಯ ಬುಗ್ಗೆಯೊಂದು ಒಡೆದಂತೆ ಅನಿಸುತ್ತದೆ. 

ಸರಿ, ನಾವಲ್ಲರೂ ಇದನ್ನು ಅನುಭವಿಸಿದ್ದೇವೆ. ಈ ಅನುಭವವನ್ನು ನಿಮ್ಮ ಆರ್ಥಿಕ ಗುರಿ ಹಾಗೂ ಕ್ಷೇಮದ ಹಾದಿಯನ್ನು ತಪ್ಪಿಸಲು ಬಿಡಬೇಡಿ. ನಿಮ್ಮ ಆರ್ಥಿಕ ಉತ್ತೇಜನವನ್ನು ವೃದ್ಧಿಸಲು ಅತೀ ಶ್ರೀಮಂತರ 8 ಸಲಹೆಗಳನ್ನು ಓದಿರಿ.

ನಾವೆಲ್ಲರೂ, ನಮ್ಮ ಜೀವನದ ಒಂದು ಹಂತದಲ್ಲಿ ‘ಕೀಪಿಂಗ್ ಅಪ್ ವಿದ್ ದ ಕರ್ದಾಶಿಯಾನ್ಸ್’ ರೀತಿ ಬದುಕಲು ಪ್ರಯತ್ನಿಸಿದ್ದೇವೆ, ಆದರೆ ಇವತ್ತಿನ ಡಿಜಿಟಲ್ ಯುಗದಲ್ಲಿ ಅದರೊಳಗಿನ ಸಾಮಾಜಿಕ ಜಾಲತಾಣದ ಉಪಸ್ಥಿತಿಯಲ್ಲಿ, ಸಾಮಾಜದ ಸ್ವೀಕೃತಿಯನ್ನು ಪಡೆಯಲು ನಾವು ಇದ್ದದ್ದನ್ನೆಲ್ಲಾ ಖರ್ಚು ಮಾಡಲು ಒತ್ತಡಕ್ಕೊಳಗಾಗುತ್ತೇವೆ.

ನಾವು ಹೆಚ್ಚಾಗಿ ಡಿಜಿಟಲ್ ತಾಣಗಳಲ್ಲಿ ಇತರರ ಜೀವನವನ್ನು ನೋಡಿ ನಾವು ಯಾಕೆ ಅಷ್ಟು ಸ್ವಚ್ಚಂದವಾಗಿ ಬದುಕುತ್ತಿಲ್ಲ ಎಂದು ಯೋಚಿಸುತ್ತಿರುತ್ತೇವೆ.

ಇತರರನ್ನು ತಮ್ಮ ಜೊತೆ ಹೋಲಿಸುವುದು. ಹೀಗೆ ಆರಂಭವಾಗುತ್ತದೆ ಕಳೆದುಹೋಗುವ ಭಯ ಹಾಗೂ ಉಳಿತಾಯಗಳ ಕುಣಿಕೆ.

ಖಂಡಿತವಾಗಿಯೂ ಲೈಕ್ ಮಾಡುವುದು, ಕಮೆಂಟ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಎಂದಿಗೂ ಮುಗಿಯದ ಸ್ಕ್ರೋಲಿಂಗ್ ಪ್ರೇರಣೆಯನ್ನು ನೀಡಬಹುದು ಆದರೆ ಎಲ್ಲಕ್ಕಿಂತಲೂ ಹೆಚ್ಚು ಅದು ಕಳೆದುಹೋಗುವ ಭಯದ ಅಥವಾ ಫೋಮೋ  ಸಮಸ್ಯೆಯನ್ನು ಹುಟ್ಟುಹಾಕುತ್ತದೆ.

ಇದು ನಿಮ್ಮ ಆರ್ಥಿಕ ಕ್ಷೇಮಕ್ಕೆ ತೀವ್ರ ಹಾನಿ ಮಾಡಿ ನಿಮ್ಮ ಜೇಬಿಗೂ ಕತ್ತರಿ ಹಾಕುತ್ತದೆ. ಹಾಗೂ, ನಮ್ಮ ಮಾನಸಿಕ ಆರೋಗ್ಯದ ಮೇಲೆ ಅದು ಹೇರುವ ಒತ್ತಡವನ್ನು ಮರೆಯದಿರೋಣ.

ಮೊದಲ ವಿಷಯಗಳು ಮೊದಲಿಗೆ - ಫೋಮೋ ಎಂದರೇನು. 

ಫೋಮೋ, ಅಥವಾ ಫಿಯರ್ ಆಫ್ ಮಿಸ್ಸಿಂಗ್ ಔಟ್(ಕಳೆದುಹೋಗುವ ಭಯ), ಎಂದರೆ ಯಾವುದೋ ಒಂದು ಮೋಜಿನ ಅಥವಾ ರೋಚಕ ಸಂಗತಿಯಿಂದ ನಾನು ಹೊರಗೆ ಉಳಿದಿದ್ದೇನೆ ಎಂಬ ಆತಂಕದ ಭಾವನೆ.

ಸಾಮಾನ್ಯವಾಗಿ ಈ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇದು ಹೇರಳವಾಗಿ ನಡೆಯುತ್ತಿದೆ - ಫೇಸ್ಬುಕ್ ಪೋಸ್ಟ್ ಗಳು, ಇನ್ಸ್ಟಾಗ್ರಾಮ್ ರೀಲ್ ಗಳು ಅಥವಾ ಟ್ವಿಟ್ಟರ್ ಪೋಸ್ಟ್ ಗಳಲ್ಲಿ.

ಫ಼ೋಮೋ ನೀವು ಶಾಪಿಂಗ್ ಮಾಡುವ ರೀತಿ, ನಿಮಗೆ ಬೇಕಾಗಿರುವ ಮತ್ತು ಅಗತ್ಯವಿರುವ ವಸ್ತುಗಳ ನಡುವಿನ ವ್ಯತ್ಯಾಸ ಇದೆಲ್ಲರದಲ್ಲೂ ಕಾಣಿಸುತ್ತದೆ.

ಇಂದಿನ ಕಾಲದಲ್ಲಿ, ಹೆಚ್ಚಿನ ಜನರಿಗೆ, ಸಾಮಾಜಿಕ ಜಾಲತಾಣ ಅವರ ಸಮುದಾಯದ ಮುಖ್ಯ ಲೈಫ್ಲೈನ್ ಆಗಿದೆ, ಹಾಗೂ ನೀವು ಆ ಗುಂಪಿನ ಭಾಗವಲ್ಲ ಎಂಬ ಭಾವನೆಯು ಫೋಮೋ ನಂತಹ ಒತ್ತಡದ ಪ್ರತಿಕ್ರಿಯೆಗೆ ಚಾಲನೆ ನೀಡಲು ಸಾಕಾಗುತ್ತದೆ.

ಊಬರ್, ಎಸ್ಪ್ರೆಸ್ಸೋ, ಸ್ನೇಹಿತರೊಂದಿಗೆ ದುಂದುವೆಚ್ಚದ ಊಟ ತಿಂಡಿ, ಇಂತಹ ವಿಷಯಗಳು, ನೀವು ಗಮನವಿರಿಸದೆ ಇತರರ ಜೀವನಶೈಲಿಯೊಂದಿಗೆ ಹೊಂದಿಕೊಳ್ಳಲು ಮಿತಿಮೀರಿ ಹೋಗುವ ಸಂಭಾವನೆಗಳನ್ನು, ಶೀಘ್ರಗತಿಯಲ್ಲಿ ಹೆಚ್ಚಿಸುತ್ತವೆ.

ಫೋಮೋ ಖರ್ಚುಗಳಿಂದ ದೂರವಿರುವುದು ಎಂದರೆ ನಿಮ್ಮ ಮೋಜಿನ ಸೊಗಸಾದ ಡಿನ್ನರ್, ಅಥವಾ ಸ್ನೇಹಿತರೊಂದಿಗಿನ ಒಳ್ಳೆಯ ಸಮಯಗಳನ್ನು ತ್ಯಾಗ ಮಾಡುವುದೆಂದಲ್ಲ.

ಇದರರ್ಥ ಕೇವಲ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದುಡಿದು ದುಂದುವೆಚ್ಚಕ್ಕೆ ‘ನೋ’ ಹೇಳಿ ‘ತೃಪ್ತಿ’ ಯ ಭಾವನೆಯನ್ನು ಪಡೆಯಲು ಪ್ರಯತ್ನಿಸಬೇಕು ಎಂದಾಗಿದೆ.

ಫೋಮೋ ನಿಮ್ಮ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಈ ‘ಕಳೆದುಹೋಗುವ ಭಯ’ ನಿಮಗೆ ಇತರರ ಬಗ್ಗೆ ಅರಿತುಕೊಂಡಿರುವುದು ಹಾಗೂ ಒಂದು ಅವಾಸ್ತವಿಕ ಜೀವನಶೈಲಿ ನಡೆಸುವ ಕಾರಣಕ್ಕಾಗಿ ನಿಮಗೆ ಒತ್ತಡವನ್ನು ನೀಡಬಹುದು.

ಶೀಘ್ರದಲ್ಲೇ, ಪೋಮೋ ನಿಮ್ಮಿಂದ ಇನ್ನಷ್ಟು ಖರ್ಚುಗಳನ್ನು ಮಾಡಿಸಿ ಆದರೂ ಕಡಿಮೆ ಮಹತ್ವದ ಅನುಭವ ಉಂಟಾಗುವ ಹಾಗೆ ಮಾಡಬಹುದು. ಉದಾಹರಣೆಗೆ, ನಿಮ್ಮ ಸಹುದ್ಯೋಗಿಗಳು ಅಥವಾ ಸ್ನೇಹಿತರು ಪ್ರವಾಸಕ್ಕಾಗಿ ರಜೆ ತೆಗೆದುಕೊಳ್ಳುತ್ತಿದ್ದಾರೆ, ಹಾಗೂ ನಿಮ್ಮಿಂದ ಹೋಗದೇ ಇರಲಾಗುವುದಿಲ್ಲ.

ನೀವು ಚಂಚಲವಾಗಿ, ಆ ಕ್ಷಣದಲ್ಲಿ ಬದುಕುತ್ತಾ, ನಿಮ್ಮ ಎಲ್ಲಾ ಖರ್ಚುಗಳನ್ನು ಕ್ರೆಡಿಟ್ ಕಾರ್ಡಿಗೆ ಹಾಕುತ್ತಿರಬಹುದು. ನೀವು ಅದರ ಬಗ್ಗೆ ಯೋಚಿಸುವುದಿಲ್ಲ, ಆದರೆ ಆ ಕ್ಷಣದಲ್ಲಿ, ನಿಮಗೆ ಆ ಮೋಜನ್ನು ಕೈಬಿಡಲು ಮನಸ್ಸಿರುವುದಿಲ್ಲ. 

ಎಲ್ಲಾ ವಿಷಯಗಳನ್ನು ಪರಿಗಣಿಸಿದಾಗ, ಏಕೆಂದರೆ ಯೋಲೋ - ಯೂ ಓನ್ಲಿ ಲಿವ್ ವನ್ಸ್(ನೀವು ಬದುಕುವುದು ಒಂದೇ ಬಾರಿ)., ಅಲ್ಲವೇ? ನಿಮ್ಮ ಸ್ನೇಹಿತರು ಮೋಜು ಮಾಡುವಾಗ ನೀವದನ್ನು ತಪ್ಪಿಸುವುದು ಸಾಲಕ್ಕೆ ಸಿಲುಕುವುದಕ್ಕಿಂತ ಕೆಟ್ಟದ್ದು, ಅಲ್ಲವೇ?

ನೀವು ಕಲಿಯಬೇಕಾಗಿರುವುದು  ನಿಮ್ಮ ಆದ್ಯತೆಯನ್ನು ನಿರ್ಧರಿಸುವುದನ್ನು ಹಾಗೂ ಮುಂಗಡವಾಗಿಯೇ ನಿಮ್ಮ ಹಣಕಾಸಿನ ಯೋಜನೆಯನ್ನು ಮಾಡುವುದು. ವರ್ತಮಾನದಲ್ಲಿ ಜಾಣ ನಿರ್ಧಾರಗಳು ಭವಿಷ್ಯದಲ್ಲಿ ಎಂದಿಗೂ ಉತ್ತಮವಾಗಿರುವುದನ್ನೇ ನೀಡುತ್ತದೆ. 

ಅಹಾಂಕಾರವು ನಿಮ್ಮ ಬಳಿ ಇನ್ನೂ ಬರದ ಹಣವನ್ನು ಸುಡುತ್ತದೆ, ಇದರಿಂದ ನೀವು ಸಾಲದ ಬಲೆಗೆ ಬೀಳುತ್ತೀರಿ.

ಚಾರ್ಲ್ಸ್ ಶ್ವಾಬ್ ನಡೆಸಿದ ಮಾಡರ್ನ್ ವೆಲ್ತ್ ಸರ್ವೇ ಪ್ರಕಾರ, ಸರಿಸುಮಾರು 33% ಅಮೇರಿಕನ್ನರು ಅವರ ಖರ್ಚಿನ ಅಭ್ಯಾಸವು, ಅವರು ವೀಕ್ಷಿಸುವ ಮಾಧ್ಯಮದಿಂದ ಎಂದರೆ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಅವರ ಸ್ನೇಹಿತರ ಹಾಗೂ ಪರಿವಾರದವರ ಪೋಸ್ಟ್ ಗಳಿಂದ ನಿರ್ದೇಶಿಸಲಾಗುತ್ತದೆ. 

ಅವರು ಮೋಜನ್ನು ತಪ್ಪಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನೇ ಇಷ್ಟ ಪಡುತ್ತಾರೆ ಎಂದೂ ಒಪ್ಪಿಕೊಂಡರು.

ಆರ್ಥಿಕ ನಿರ್ಧಾರಗಳು ಸ್ನೇಹಿತರ ಆಡಂಬರದ ಸಾಮಾಜಿಕ ಜಾಲತಾಣದ ಫೀಡ್ ಗಳಿಂದ  ಪ್ರೇರೇಪಿತವಾಗಿರುತ್ತವೆ.

ಫೋಮೋ ನಿಮ್ಮ ಹಣಕಾಸಿನೊಂದಿಗೆ ಆಟವಾಡುವುದನ್ನು ನೀವು ಹೇಗೆ ನಿಲ್ಲಿಸಬಹುದು?

ಖಂಡಿತ! ನಿಮ್ಮ ಫೋಮೋ ಸ್ಥಿತಿಗೆ ವಿರಾಮ ನೀಡಲು ಒಂದು ಉಪಾಯವೆಂದರೆ ನಿಮ್ಮ ಸಾಮಾಜಿಕ ಜಾಲತಾಣದ ಎಪ್ಲಿಕೇಷನ್ ಗಳನ್ನು ಅನಿನ್ಸ್ಟಾಲ್ ಮಾಡುವುದು, ಹಾಗೂ ಇನ್ನೊಂದು ಹೆಚ್ಚು ಸಮಂಜಸವಾದ ಉಪಾಯವಿದೆ.

ಫೋಮೋ ದೊಂದಿಗೆ ಹೋರಾಡುವುದು ಒಂದು ಪ್ರಶ್ನೆಯೇ ಆಗಿದೆ, ನಿಮ್ಮನ್ನು ನೀವೇ ಮಾನಸಿಕವಾಗಿ ಬಲಿಷ್ಠವಾಗಿಸಿ ಉತ್ತಮ 

ಮನೋಬಲವನ್ನು ಹೊಂದಿರಬೇಕು. ಯೋಜನೆ ಮಾಡಿ, ಗೆಟ್ ಸೆಟ್ ಗೋ:

  • ‘ಕಳೆದುಕೊಳ್ಳುವ ಭಯ’ದ ಯೋಚನೆಯನ್ನು ಕಳೆದುಹಾಕಿ.
  • ತಿಂಗಳು/ವಾರದ ಮೊದಲೇ ನಿಮ್ಮ ಹಣಕಾಸಿನ ಯೋಜನೆಯನ್ನು ಮಾಡಿ ಇಡಿ.
  • ನಿಮ್ಮ ಬಜೆಟ್ ಅನ್ನು ಸಂರಕ್ಷಿಸಿ
  • ನಿಮ್ಮ ತೃಪ್ತಿಯ ಪ್ರಮಾಣವನ್ನು ಬೆಳೆಸಿ.

ಸಾಮಾಜಿಕ ಜಾಲತಾಣವನ್ನು ಏನಾಗಿದೆಯೋ ಅದಕ್ಕೆ ಅಷ್ಟೇ ಮಹತ್ವ ನೀಡಿ

ಒಂದು ಇನ್ಸ್ಟಾಗ್ರಾಮ್ ಪೋಸ್ಟ್, ಉದಾಹರಣೆಗೆ, ಒಂದು ತೋರಿಕೆ ಮಾತ್ರ ನೈಜ ಜಗತ್ತಿನ ಚಿತ್ರಣವಲ್ಲ ಎಂದು ನೆನಪಿಡಿ.

ಇದನ್ನು ಹೇಳುವುದು ಇದು ಹೆಗ್ಗಳಿಕೆ ಅಥವಾ ನೀತಿಬಾಹಿರ ಎಂದು ಸೂಚಿಸುವುದಿಲ್ಲ.

ಬದಲಾಗಿ, ಇದು ಜೀವನದ ಒಂದು ಭಾಗದ ಚಿತ್ರಣ ಮಾತ್ರವೇ ಆಗಿದೆ.ನೀವು ನೋಡುತ್ತಿರುವ ಆ ಒಂದು “ಅದ್ಭುತ” ಫೋಟೋ ಅಥವ ವೀಡಿಯೋ ನೂರು ಪ್ರಯತ್ನಿಸಿ ವಿಫಲವಾದ ಯತ್ನಗಳಲ್ಲಿ ಒಂದಾಗಿರಬಹುದು.

ಸಂಯಮದೊಂದಿಗೆ ಫೋಮೋ ಅನ್ನು ನಿರ್ವಹಿಸುವ ಒಂದು ಸರಳ ವಿಧಾನವೆಂದರೆ ಆ ಪೋಸ್ಟ್ ಅನ್ನು ಆಕರ್ಷಕಗೊಳಿಸಲು ಏನೆಲ್ಲಾ ಮಾಡಲಾಯಿತು ಎನ್ನುವುದನ್ನು ಅರಿಯುವುದು.

ಈ ರೀತಿ, ನೀವು ಸೆರೆಹಿಡಿಯುವ ಚಿತ್ರಗಳನ್ನು ಅಥವಾ ಮಾಧ್ಯಮವನ್ನು ದೋಷರಹಿತವಾಗಿಸುವ ಪ್ರಯತ್ನದಿಂದ ನಿಮ್ಮನ್ನು ನೀವೇ ಮುಕ್ತಗೊಳಿಸಬಹುದು.

ಅದು ಅಂಕುಡೊಂಕಾಗಿ ಮುಜುಗರ ತರುವಂತದ್ದಾಗಿದ್ದರೂ ನೈಜವಾಗಿರಿ. ಖಚಿತವಾಗಿ ಏನೆನ್ನು ಹೇಳಲು ಸಾಧ್ಯ? ನೀವು ಒಬ್ಬರಿಂದ ‘ವಾವ್’ ಅನ್ನಿಸುವ ಬದಲಿಗೆ ‘ಹಾಹಾ’ ಅನ್ನಿಸಿ ಸಾಮಾಜಿಕ ಜಾಲತಾಣದಲ್ಲಿರುವ ನಿಮ್ಮ ಜಾಲದಾದ್ಯಂತ ನೀವು, ಫೋಮೋ ಆತಂಕದ ಕುಣಿಕೆಯನ್ನು ಕತ್ತರಿಸಬಹುದು.

ಆಫ್ಲೈನ್ ಸಮುದಾಯ ಬೆಳವಣಿಗೆಯಲ್ಲಿ ತಮ್ಮನ್ನು ತಾವೇ ತೊಡಗಿಸಿ

ಡಿಜಿಟಲ್ ವೇದಿಕೆಯಲ್ಲಿ ನೀವು ಎಷ್ಟೇ ಮಂದಿಯನ್ನು ಫಾಲೋ ಮಾಡುತ್ತಿದ್ದರೂ ಅಥವಾ ನಿಮ್ಮನ್ನು ಅವರು ಫಲೋ ಮಾಡುತ್ತಿದ್ದರೂ ಅದು ನಿಮ್ಮ ಬೆಲೆಯನ್ನು ಸೂಚಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ದೈನಂದಿನ ಬದುಕಿನಲ್ಲಿ ಸಕಾರಾತ್ಮಕತೆ ಹಾಗೂ ಪ್ರೇರಣೆಯನ್ನು ನೀಡಬಲ್ಲ ಆಫ್ಲೈನ್ ಸಂಬಂಧಗಳನ್ನು ಬೆಳೆಸುವುದನ್ನು ಪ್ರಯತ್ನಿಸಿ.

ಎಲ್ಲವನ್ನೂ ಪರಿಗಣಿಸಿದಾಗ, ನಿಮ್ಮ ಒಡನಾಡಿಗಳೊಂದಿಗೆ ಕಳೆದ ಸಮಯ ನಿಮ್ಮನ್ನು ಶಾಂತವಾಗಿಸಿ ನಿಮ್ಮ ಮನಸ್ಥಿತಿ ಹಾಗೂ ಕ್ಷೇಮವನ್ನು ವೃಧಿಸುತ್ತದೆ.

ಇದರ ಜೊತೆ, ಜಾಲತಾಣದಲ್ಲಿ ನೀವು ನೋಡುವ ಹಾಗೂ ಹಂಚುವುದಕ್ಕಿಂತ ಹೆಚ್ಚಿನ ಅನುಭವಗಳನ್ನು ಪಡೆಯುವಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ.

ಕೆಲವು ಮೋಜಿನ ಖರ್ಚುಗಳನ್ನೂ ಮಾಡಿ

ನೀವೊಂದು ಪೋಸ್ಟಿನಲ್ಲಿ ಸ್ಟೈಲಿಷ್ ಶೂಗಳನ್ನು ನೋಡಿ ತಕ್ಷಣ ಖರೀದಿ ಮಾಡಬೇಕೆಂಬ ಆಸೆಯಾಗುವುದು ನಿಜವಲ್ಲವೇ? ಅಥವಾ ಒಬ್ಬರನ್ನು ಪ್ರವಾಸದಲ್ಲಿ ನೋಡಿದಾಗ?

ಇದೊಂದು ಒಳ್ಳೆಯ ಅವಕಾಶವಾಗಿರಬಹುದು ನಿಮ್ಮ ಹೊಸ ಅನುಭವ, ಒಳ್ಳೆಯ ಡ್ರೆಸ್, ಅಥವಾ ನೀವು ಬೆನ್ನಟ್ಟಿರುವ ಆ ವಸ್ತುವಿಗಾಗಿ ನಿಮ್ಮ ಆರ್ಥಿಕ ಯೋಜನೆಯಲ್ಲಿ ಸ್ವಲ್ಪ ಸ್ಥಾನ ನೀಡಲು.

ಪುಟ್ಟ ಹೆಜ್ಜೆಗಳೊಂದಿಗೆ ಆರಂಭಿಸಿ. ಮೊದಲಿಗೆ ನೀವು ಎಲ್ಲಿ ಹಣ ಖರ್ಚು ಮಾಡುತ್ತೀರಿ ಎಂದು ಅರಿಯುವುದು. ಇದಕ್ಕಾಗಿ ನೀವು ಸರಳ ಹಾಗೂ ಸಮರ್ಥ ಆನ್ಲೈನ್ ಬಜೆಟ್ ಕ್ಯಾಲ್ಕುಲೇಟರ್ ಗಳನ್ನು ಬಳಸಬಹುದು.

ಮುಂದಿನ ಹೆಜ್ಜೆಯಾಗಿದೆ ಬಜೆಟ್ ಯೋಜಿಸುವುದು. ಒಂದು ನಿಯೋಜಕದ ಸಹಾಯದಿಂದ ನೀವೇ ಇದನ್ನು ಮಾಡಬಹುದು ಅಥವಾ ಒಬ್ಬ ಆರ್ಥಿಕ ಸಲಹೆಗಾರನ ಸಹಾಯವನ್ನು ಪಡೆಯಬಹುದು.

ನೀವು ಅಜಾಗರೂಕರಾಗಿ ಖರ್ಚು ಮಾಡುವ ಬದಲಿಗೆ,ಅವರು ನಿಮಗೆ ನಿಮ್ಮ ಹಣವನ್ನು ಅಗತ್ಯವಿದ್ದಲ್ಲಿ ಹಾಗೂ ನೀವು ಬಯಸಿದ್ದಲ್ಲಿ ಮಾತ್ರ ಹಾಕುವಂತೆ ನಿಮಗೆ ಸಹಾಯ ಮಾಡುತ್ತಾರೆ.

ಒಂದು ತೆರಿಗೆ ವಿನಾಯಿತಿ ಬ್ಯಾಂಕ್ ಖಾತೆ ಅಥವಾ ಟ್ಯಾಕ್ಸ್ ಎಕ್ಸೆಂಪ್ಟ್ ಬ್ಯಾಂಕ್ ಅಕೌಂಟ್(ಟಿ ಎಫ್ ಎಸ್ ಎ) ಅನ್ನು ತೆರೆಯುವುದು ಒಳ್ಳೆಯ ವ್ಯವಸ್ಥೆಯಾಗಿರಬಹುದು. ಇದು ನಿಮ್ಮ ಖರೀದಿಗಳಿಗೆ ಬೇಕಾದ ಹಣವನ್ನು ಸಂಗ್ರಹಿಸಿ ಇಡಲು ಒಂದು ಅದ್ಭುತ ಸ್ಥಳವಾಗಬಹುದು.

ನೀವು ನಿಜವಾಗಿ ಬಯಸುತ್ತಿರುವ ವಿಷಯಗಳಿಗಾಗಿ ನೀವು ನಿಮ್ಮ ಬಜೆಟ್ ನ ಒಂದು ಭಾಗವನ್ನು ಬದಿಗಿಡುತ್ತಿರುವಾಗ, ಫೋಮೋ ಗೆ ಒಗ್ಗುವುದು ಸರಳವಾಗುತ್ತದೆ.

ಈ ರೀತಿ, ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ನಿಮ್ಮನ್ನು ಆಕರ್ಷಿಸಿದಾಗ ನೀವು ನಿಮ್ಮ ಗುರಿ ಹಾಗೂ ಉಳಿತಾಯದ ಕಾರಣಗಳ ಮೇಲೆ ಗಮನವಿಟ್ಟುಕೊಳ್ಳಬಹುದು.

ಆದಷ್ಟು ನಗದು ಹಣ ಕೊಂಡೊಯ್ಯುವುದನ್ನು ತಪ್ಪಿಸಿ

ಈಗ, ನೀವು ಹೋದಲ್ಲೆಲ್ಲಾ ನಗದು ಹಣವನ್ನು ಒಯ್ದರೆ, ನಿಮ್ಮ ಬಳಿ ನಿಯಮಿತ ಹಣವಿದ್ದು ಇದು ನಿಮ್ಮ ಖರ್ಚಿನ ಅಭ್ಯಾಸವನ್ನೂ ಕಡಿಮೆ ಮಾಡುತ್ತದೆ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡಿನೊಂದಿಗೆ ನೀವು ಉದ್ವೇಗಕ್ಕೊಳಗಾಗಿ ಖರ್ಚು ಮಾಡುವ ಸಂಭಾವನೆ ಹೆಚ್ಚಿರುತ್ತದೆ ಕಾರಣ ಕಾರ್ಡಿನಿಂದ ಸಿಗುವ ಹೆಚ್ಚಿನ ಹಣ, ಆಗ ವ್ಯವಹಾರಕ್ಕೆ ವಿರಾಮ ನೀಡುವುದು ಕಷ್ಟವಾಗುತ್ತದೆ.

ಸಾಮಾನ್ಯವಾಗಿ, ಫೋಮೋ ನಮ್ಮನು ಹಿಡಿಯುವುದು ಇಲ್ಲಿಯೇ. ನೀವೊಂದು ಡಿನ್ನರ್ ಅಥವಾ ಪಾಟೀಗೆ ಹೋದಾಗ ನಿಗದಿತ ಮೊತ್ತದ ಹಣವನ್ನು ಇಟ್ಟುಕೊಂಡಿದ್ದರೆ, ಈಗಾಗಲೇ ಸೆಟ್ ಆಗಿರುವ ಬಜೆಟ್ ನಿಮ್ಮ ಬಳಿ ಇದ್ದು, ಇದು ನೀವು ಅನಗತ್ಯವಾಗಿ ಉದ್ವೇಗಕ್ಕೊಳಗಾಗಿ ಖರ್ಚು ಮಾಡುವುದನ್ನು ತಡೆಯುತ್ತದೆ!

ಹೂಡಿಕೆ ಮಾಡಿ

ಸಂಪತ್ತನ್ನು ಬೆಳೆಸುವುದು ಸಮಯ ತೆಗೆದುಕೊಳ್ಳುತ್ತದೆ ಹಾಗೂ ದೀರ್ಘಾವಧಿಯಿಂದ ಹೂಡಿಕೆ ಮಾಡುತ್ತಿರುವ ಜನರಿಗೆ, ಮಾರುಕಟ್ಟೆಯಲ್ಲಿ ಸಮಯ ಬಹುಮೂಲ್ಯವಾಗಿರುತ್ತದೆ.

ದೀರ್ಘಾವಧಿಗೆ ಸಂಪತ್ತನ್ನು ಸಂಗ್ರಹಿಸುವುದು.

ಸಂಪತ್ತನ್ನು ವೃದ್ಧಿಸುವುದು ಒಂದು ದೀರ್ಘ ಕಾಲದ ಪ್ರಯತ್ನವಾಗಿರುತ್ತದೆ, ಹಾಗೂ ದೀರ್ಘಾವಧಿಯ ಹೂಡಿಕೆದಾರರಿಗೆ, ನಿಮ್ಮ ಹೂಡಿಕೆಯಾಗಿರುವ ಹಣದ ಪ್ರಮಾಣವು, ನೀವು ನಿಮ್ಮ ಆರ್ಥಿಕ ಗುರಿಯನ್ನು ತಲುಪುತ್ತಿರೋ ಇಲ್ಲವೋ ಎಂದು ನಿರ್ಧರಿಸುವ ಸರ್ವೋಚ್ಛ ಅಂಶವಾಗಿದೆ.

ಹಾಗೂ ನೀವು ಎಷ್ಟು ಶೀಘ್ರವಾಗಿ ಉಳಿತಾಯ ಹಾಗೂ ಹೂಡಿಕೆಯನ್ನು ಆರಂಭಿಸುತ್ತೀರೋ, ನಿಮ್ಮ ಹಣಕ್ಕೆ ಬೆಳೆಯಲು ಅಷ್ಟೇ ಹೆಚ್ಚು ಸಮಯ ಸಿಗುತ್ತದೆ, ಕಂಪೌಂಡಿಂಗ್ ನ ಶಕ್ತಿಯಿಂದಾಗಿ.

ಹೂಡಿಕೆ ಮಾಡುವಾಗ, ವಿಭಿನ್ನ ಆಸ್ತಿ ವರ್ಗಗಳಾದ್ಯಂತ ನಿಮ್ಮ ಸಂಪತ್ತಿನ ಪೋರ್ಟ್ಫೋಲಿಯೋ ಅನ್ನು ವೈವಿಧ್ಯೀಕರಿಸಿ ಉದಾಹರಣೆಗೆ ಷೇರುಗಳು, ಚಿನ್ನ, ಬಾಂಡ್ ಗಳು ಹಾಗೂ ನಗದು ಹೂಡಿಕೆ ಕೂಡಾ.

ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಎಲ್ಲಾ ಹೂಡಿಕೆ ಶಕ್ತಿಗಳ ಉತ್ತಮ ಮಿಶ್ರಣವನ್ನು ಹೊಂದಿದ್ದರೆ, ಮಾರುಕಟ್ಟೆಯಲ್ಲಿ ಆಗಬಲ್ಲ ಸಂಭಾವ್ಯ ನಷ್ಟಗಳನ್ನು ನೀವು ನಿಭಾಯಿಸಬಹುದು. ನೀವು ಕೇವಲ ರೂ.1ರ ಜೊತೆ ಡಿಜಿಟಲ್ ಗೋಲ್ಡ್ ನಲ್ಲಿ ಉಳಿತಾಯ ಹಾಗೂ ಹೂಡಿಕೆಯನ್ನು ಜಾರ್ ಮೂಲಕ ಆರಂಭ ಮಾಡಬಹುದು.

Subscribe to our newsletter
Thank you! Your submission has been received!
Oops! Something went wrong while submitting the form.